ಮಂಡ್ಯ:
ರೈತನೊಬ್ಬ ತನಗೆ ಕಡಿದ ವಿಷಕಾರಿ ಹಾವನ್ನು ತುಂಡು ತುಂಡು ಮಾಡಿ ಪ್ರಾಣ ಬಿಟ್ಟ ದಾರುಣ ಘಟನೆ ಮಳವಳ್ಳಿ ತಾಲೂಕಿನ ಯತ್ತಂಬಾಡಿ ಗ್ರಾಮದಲ್ಲಿ ನಡೆದಿದೆ.
ವ್ಯವಸಾಯ ಮತ್ತು ರೇಷ್ಮೆಹುಳು ಸಾಕಣೆ ಮಾಡಿಕೊಂಡು ಪುಟ್ಟಮಾದು ಜೀವನ ನಡೆಸುತ್ತಿದ್ದರು. ಸೋಮವಾರ ಬೆಳಗ್ಗೆ ರೇಷ್ಮೆ ಹುಳುಗಳಿಗೆ ಸೊಪ್ಪು ತರಲೆಂದು ಯತ್ತಂಬಾಡಿ ಗ್ರಾಮದಲ್ಲಿರುವ ತನ್ನ ಸಹೋದರಿ ಮಹದೇವಮ್ಮ ಅವರ ಹಿಪ್ಪುನೇರಳೆ ತೋಟಕ್ಕೆ ತೆರಳಿದ್ದರು. ಸೊಪ್ಪು ಕೀಳುತ್ತಿದ್ದ ವೇಳೆ ವಿಷಪೂರಿತ ಹಾವು ಪುಟ್ಟಮಾದು ಅವರ ಕಾಲನ್ನು ಕಚ್ಚಿದೆ. ಇದನ್ನು ಗಮನಿಸಿದ ಅವರು, ಹಾವು ಕಚ್ಚಿದ ಭಾಗಕ್ಕೆ ಮುಂಜಾಗ್ರತಾ ಕ್ರಮವಾಗಿ ತನ್ನ ನಡುವಿನಲ್ಲಿದ್ದ ಉಡುದಾರ ಕಟ್ಟಿದ್ದಾರೆ. ನಂತರ ಕೈಯಲ್ಲಿದ್ದ ಮಚ್ಚಿನಿಂದ ಹಾವನ್ನು ಆರು ಭಾಗಗಳಾಗಿ ಕತ್ತರಿಸಿದ್ದಾರೆ. ಪಕ್ಕದ ಜಮೀನಿನವರು ತಕ್ಷಣ ಪುಟ್ಟಮಾದು ಅವರನ್ನು ಹಲಗೂರಿನ ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರು. ಆದರೆ, ದುರದೃಷ್ಟವಶಾತ್ ಮಾರ್ಗಮಧ್ಯೆ ಮೃತಪಟ್ಟರೆನ್ನಲಾಗಿದೆ.
ಈ ವೇಳೆ ಜೋರಾಗಿ ಕೂಗಿಕೊಂಡಿದ್ದು, ಸುತ್ತಮುತ್ತಲಿನ ಜಮೀನಿನಲ್ಲಿದ್ದವರು ನೆರವಿಗೆ ಧಾವಿಸಿದ್ದಾರೆ. ಕೂಡಲೆ ಹಲಗೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ವಿಷವೇರಿ ಪುಟ್ಟಮಾದು ಕೊನೆಯುಸಿರೆಳೆದಿದ್ದಾರೆ. ಮೃತದೇಹದ ಮುಂದೆ ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಮೃತರಿಗೆ ಮೂರು ವರ್ಷದ ಹೆಣ್ಣು ಮಗು, ನಾಲ್ಕು ವರ್ಷದ ಗಂಡು ಮಗು ಮತ್ತು ಪತ್ನಿ ಇದ್ದಾರೆ. ಹಲಗೂರು ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
