ಶ್ರೀನಗರ:
ಪುಲ್ವಾಮಾ ಭಯೋತ್ಪಾದಕ ದಾಳಿಯ ಬಾಂಬರ್ ಗೆ ಆಶ್ರಯ ನೀಡಿದ್ದ ತಂದೆ ಮತ್ತು ಮಗಳನ್ನು ರಾಷ್ಟ್ರೀಯ ತನಿಖಾ ದಳ ಇಂದು ಬಂಧಿಸಿದೆ.
ಕಳೆದ ವಾರ ಪುಲ್ವಾಮಾ ಹಜಿಬಲ್ ಪ್ರದೇಶದವನಾದ ಶಕೀರ್ ಬಶೀರ್ ಮ್ಯಾಗ್ರೆ ಎಂಬಾತನನ್ನು ಬಂಧಿಸಲಾಗಿತ್ತು. ಈಗ ಆತನ ಮಗಳನ್ನು ಬಂಧಿಸಲಾಗಿದೆ. ಇವರಿಬ್ಬರು ಉಗ್ರರಿಗೆ ಆಶ್ರಯ ನೀಡಿದ್ದೂ ಅಲ್ಲದೆ, ಬಾಂಬ್ ತಯಾರಿಸಲು ಸಹಾಯ ಮಾಡಿದ್ದರು.

ಆತ್ಮಾಹುತಿ ದಳದ ಮುಖ್ಯಸ್ಥ ಅದಿಲ್ ದಾರ್ ಮತ್ತು ಉಗ್ರ ಉಮರ್ ಫಾರುಕ್ಗೆ 2018ರಿಂದ 2019ರ ಫೆಬ್ರವರಿ ದಾಳಿ ಆಗುವವರೆಗೆ ಮ್ಯಾಗ್ರೆ ತನ್ನ ಮನೆಯಲ್ಲಿ ನೆಲೆ ನೀಡಿದ್ದ. ಜತೆಗೆ ಸ್ಫೋಟಕ ವಸ್ತುಗಳ ತಯಾರಿಕೆಗೆ ಸಹಾಯ ಮಾಡಿದ್ದ. ಫರ್ನಿಚರ್ಸ್ ಅಂಗಡಿ ಇಟ್ಟುಕೊಂಡಿದ್ದ ಮ್ಯಾಗ್ರೆ, ಉಗ್ರ ಮೊಹಮ್ಮದ್ ಉಮರ್ ಸಲಹೆಯಂತೆ, ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿ ಸಿಆರ್‌ಪಿಎಫ್ ಬೆಂಗಾವಲುಗಳ ಚಲನೆ ನಿಗಾ ಇಟ್ಟಿದ್ದ. ಅಲ್ಲದೆ ಸಿಆರ್‌ಪಿಎಫ್ ದಳದ ಚಲನೆಗಳ ಬಗ್ಗೆ ಉಗ್ರರಿಬ್ಬರಿಗೆ ಮಾಹಿತಿ ನೀಡುತ್ತಿದ್ದ. ಜತೆಗೆ ಕಾರಿಗೆ ಬಾಂಬ್ ಅಳವಡಿಸಲು ಮಾರುತಿ ಇಕೋ ಕಾರ್ನ್ನು ಬದಲಾಯಿಸಿದ್ದ ಎನ್ನಲಾಗಿದೆ.
ಬಾಂಬ್ ಸ್ಫೋಟಗೊಳಿಸುವ ದಿನ ಮ್ಯಾಗ್ರೆ ತಾನೇ ಕಾರನ್ನು ಚಲಾಯಿಸಿಕೊಂಡು ಬಂದಿದ್ದ. ಆದರೆ ದಾಳಿಯ ಸ್ಥಳದಿಂದ 500 ಮೀಟರ್ ದೂರದಲ್ಲಿ ವಾಹನದಿಂದ ಕೆಳಗಿಳಿದಿದ್ದ. ಇದರಿಂದಲೇ ತಿಳಿಯುತ್ತದೆ ಬಾಂಬ್ ಸ್ಫೋಟ ಪ್ರಕರಣದಲ್ಲಿ ಆತ ಭಾಗಿಯಾಗಿದ್ದ ಎಂದು ಎನ್ಐಎ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
