ಮಹಿಳಾ ಟಿ20 ವಿಶ್ವಕಪ್​ ವೇಳಾಪಟ್ಟಿ ಪ್ರಕಟ!

ದುಬೈ:

      ಮಹಿಳಾ ಟಿ20 ವಿಶ್ವಕಪ್​ ಅಂತಿಮ ವೇಳಾಪಟ್ಟಿಯನ್ನು T20 ವರ್ಲ್ಡ್ ಕಪ್ ಇಂದು ಪ್ರಕಟಿಸಿದೆ.  

      2020ರಂದು ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಿರುವ ಐಸಿಸಿ ಮಹಿಳಾ ಟಿ20 ಕ್ರಿಕೆಟ್ ಟೂರ್ನಿ ಫೆಬ್ರವರಿ 21ರಿಂದ ಮಾರ್ಚ್​ 8 ರವರೆಗೆ ನಡೆಯಲಿದೆ.

     2020ರ ಮಹಿಳಾ ವಿಶ್ವಕಪ್​ನಲ್ಲಿ ಒಟ್ಟು 10 ತಂಡಗಳು ಪಾಲ್ಗೊಳ್ಳುತ್ತಿದ್ದು ಗ್ರೂಪ್ ‘ಎ’ ಮತ್ತು ಗ್ರೂಪ್ ‘ಬಿ’ ಎಂದು ವಿಂಗಡಿಸಲಾಗಿದೆ.

      ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ಭಾರತ, ಶ್ರೀಲಂಕಾ ಹಾಗೂ ಬಾಂಗ್ಲಾದೇಶ ‘ಎ’ ಗ್ರೂಪ್​ನಲ್ಲಿದ್ದರೆ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದಕ್ಷಿಣ ಆಫ್ರಿಕಾ, ಪಾಕಿಸ್ತಾನ ಹಾಗೂ ಥಾಯ್ಲೆಂಡ್ ‘ಬಿ’ ಗ್ರೂಪ್​ನಲ್ಲಿದೆ. 

      ಭಾರತ ಮಹಿಳಾ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಇದೇ ವೇಳೆ ಥಾಯ್ಲೆಂಡ್‌ ಮಹಿಳಾ ತಂಡ ಟಿ20 ವಿಶ್ವಕಪ್‌ ಟೂರ್ನಿಗೆ ಇದೇ ಮೊದಲ ಬಾರಿ ಅರ್ಹತೆ ಗಿಟ್ಟಿಸಿದೆ.

      ಮಹಿಳಾ ಟಿ20 ವಿಶ್ವಕಪ್‌ ಮುಗಿದ ಬಳಿಕ ಪುರುಷರ ಕದನ ಆರಂಭವಾಗಲಿದ್ದು, ಒಟ್ಟು 16 ತಂಡಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಲಿವೆ. 

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link