ಇನ್ಮುಂದೆ ಕನ್ನಡದಲ್ಲೇ ಬ್ಯಾಂಕಿಂಗ್ ಪರೀಕ್ಷೆ : ಕೇಂದ್ರ ಅನುಮತಿ!

ನವದೆಹಲಿ:

       RRB, IBPS ಪರೀಕ್ಷೆಗಳನ್ನು ಕನ್ನಡದ ಕನ್ನಡ ಸೇರಿದಂತೆ 13 ಭಾರತೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ನಿರ್ಮಲಾ ಸೀತಾರಾಮನ್ ರವರು ಭರವಸೆ ನೀಡಿದ್ದಾರೆ.

      ಮೋದಿ ಸರ್ಕಾರ್ 2.0 ನ ಮೊದಲ ಬಜೆಟ್ ಮಂಡನೆಗೂ ಮುನ್ನ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ(ಜುಲೈ 4)ದಂದು ಲೋಕಸಭೆಯ ಮುಂಗಾರು ಅಧಿವೇಶನದಲ್ಲಿ ಆರ್ಥಿಕ ಸಮೀಕ್ಷೆ ವರದಿ ಮಂಡನೆ ಮಾಡಿದರು.

      ಈ ವೇಳೆ IBPS ಪರೀಕ್ಷೆ ಹಿಂದಿ ಮತ್ತು ಇಂಗ್ಲೀಷ್ ನಲ್ಲಿ ಮಾತ್ರ ಬರೆಯಲು ಸಾಧ್ಯವಿದೆ. ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಿದರೆ, ಸ್ಥಳೀಯ ಉದ್ಯೋಗ ಆಕಾಂಕ್ಷಿಗಳಿಗೆ ನೆರವಾಗಲಿದೆ ಎಂದು ಕಾಂಗ್ರೆಸ್ ಮುಖಂಡ ಜಿಸಿ ಚಂದ್ರಶೇಖರ್ ಹೇಳಿದರು.

      ಈ ಸಂದರ್ಭದಲ್ಲಿ ಗ್ರಾಮೀಣ ಬ್ಯಾಂಕ್ ಪರೀಕ್ಷೆಯ ವಿಚಾರವನ್ನು ಪ್ರಸ್ತಾಪಿಸಿ, ಜಿಸಿ ಚಂದ್ರಶೇಖರ್ ಸೇರಿದಂತೆ ಕರ್ನಾಟಕದ ಸಂಸದರು ಶೂನ್ಯವೇಳೆಯಲ್ಲಿ ಎತ್ತಿರುವ ಪ್ರಶ್ನೆ ಬಗ್ಗೆ ಸರ್ಕಾರ ಪರಿಗಣಿಸಲಿದೆ. ಸ್ಥಳೀಯ ಭಾಷೆಯಲ್ಲಿ ಬ್ಯಾಂಕಿಂಗ್ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ಅವರು ಹೇಳಿದರು.

      ಈ ಮೂಲಕ RRB, IBPS ಪರೀಕ್ಷೆಗಳನ್ನು ಕನ್ನಡದಲ್ಲೇ ಬರೆಯುವ ಅವಕಾಶ ಸಿಗಲಿದೆ. ಕನ್ನಡ ಸೇರಿದಂತೆ 13 ಭಾರತೀಯ ಭಾಷೆಗಳಲ್ಲಿ(ಅಸ್ಸಾಮೀಸ್, ಬಂಗಾಳಿ ,ಗುಜರಾತಿ, ಕನ್ನಡ, ಕೊಂಕಣಿ, ಮಲ್ಯಾಲಂ, ಮಣಿಪುರಿ, ಮರಾಠಿ, ಒಡಿಯಾ, ಪಂಜಾಬಿ,ತಮಿಳು,
ತೆಲುಗು) ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ನಿರ್ಮಲಾ ಸೀತಾರಾಮನ್ ರವರು ಭರವಸೆ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link