ನವದೆಹಲಿ :
ಕೇಂದ್ರವು ಪ್ರತಿ ಶನಿವಾರವನ್ನು ಪಬ್ಲಿಕ್ ಹಾಲಿಡೇ ಎಂದು ಪರಗಣಿಸಿ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಸಾರ್ವಜನಿಕ ರಜಾದಿನವೆಂದು ಘೋಷಿದೆ.
ಈ ಮೂಲಕ ಕೇಂದ್ರ ಸರ್ಕಾರವು ಜೀವಾ ವಿಮಾ ನಿಗಮದ ಉದ್ಯೋಗಿಗಳಿಗೆ ಭರ್ಜರಿ ಸಿಹಿಸುದ್ದಿಯೊಂದನ್ನು ನೀಡಿದ್ದು, ತಕ್ಷಣದಿಂದ ಜಾರಿಗೆ ಬರುವಂತೆ ಜೀವ ವಿಮಾ ನಿಗಮಕ್ಕೆ (ಎಲ್‌ಐಸಿ) ಪ್ರತಿ ಶನಿವಾರವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದೆ.
ಹಣಕಾಸು ಸೇವೆಗಳ ಇಲಾಖೆಯ (ಡಿಎಫ್ ಎಸ್) ಈ ಇತ್ತೀಚಿನ ಕ್ರಮವನ್ನು ನೆಗೋಷಿಯಬಲ್ ಇನ್ ಸ್ಟ್ರುಮೆಂಟ್ಸ್ ಆಕ್ಟ್ 1881 ರ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಒಂದು ಲಕ್ಷಕ್ಕೂ ಹೆಚ್ಚು ಎಲ್ ಐಸಿ ಉದ್ಯೋಗಿಗಳು ಪ್ರಯೋಜನ ಪಡೆಯುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಎಲ್‌ಐಸಿ ಉದ್ಯೋಗಿಗಳು ವೇತನ ಪರಿಷ್ಕರಣೆಗಾಗಿ ಕಾತರದಿಂದ ಕಾಯುತ್ತಿರುವ ಸಮಯದಲ್ಲಿ ಈ ನಿರ್ಧಾರ ಬಂದಿದೆ, ಎಲ್ ಐಸಿ ಆಡಳಿತ ಮಂಡಳಿಯು ಈ ಸೋಮವಾರ ಉದ್ಯೋಗಿ ಸಂಘಗಳೊಂದಿಗೆ ವಾಸ್ತವಿಕ ಸಭೆ ನಡೆಸಿ ವೇತನ ಪರಿಷ್ಕರಣೆಯ ಅಂತಿಮ ವಿವರಗಳನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ