ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರನ ಬಂಧನ!!

ಮುಂಬೈ:

      ಭೂಗತ ಪಾತಕಿ ದಾವೂದ್ ಇಬ್ರಾಹಿಂ ಹಾಗೂ ಛೋಟಾ ರಾಜನ್ ಮಾಜಿ ಸಹಚರ ಇಜಾಝ್ ಲಕ್ಡಾವಾಲಾನನ್ನು ಮುಂಬೈ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ.

      ಬಂಧಿತ ಪಾತಕಿ ಲಕ್ಡಾವಾಲಾನನ್ನು ಜನವರಿ 21 ರವರೆಗೆ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂತೋಷ್ ರಾಸ್ತೋಗಿ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

     ಕಳೆದ 20 ವರ್ಷಗಳಿಂದ ಪೊಲೀಸರ ಕಣ್ತಪ್ಪಿಸಿ ಓಡಾಡುತ್ತಿದ್ದ ಆತನ ವಿರುದ್ಧ ಮುಂಬೈನಲ್ಲಿ 25 ಪ್ರಕರಣಗಳು ಸೇರಿದಂತೆ ಒಟ್ಟು 27 ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪವಿದೆ.

      ನಾವು ಕಳೆದ 6 ತಿಂಗಳುಗಳಿಂದ ಇಜಾಝ್‌ನನ್ನು ಬಂಧಿಸಲು ಯತ್ನಿಸುತ್ತಿದ್ದೆವು. ಇಜಾಝ್‌ನ ಮಗಳನ್ನು ಡಿ.28ರಂದು ಬಂಧಿಸಿದ ಬಳಿಕ ಮಹತ್ವದ ಸುಳಿವು ಪಡೆದಿದ್ದೆವು. ‘ಈತನ ಬಂಧನದಿಂದಾಗಿ ಮೂಲ ಗ್ಯಾಂಗ್ ಬಗ್ಗೆ ಕೆಲವು ಪ್ರಮುಖ ವಿಚಾರಗಳು ಹೊರಬೀಳುವ ಸಾಧ್ಯತೆಯಿದೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link