ನಾಸಾ ಮಾಜಿ ವಿಜ್ಞಾನಿ, ವಿದ್ವಾಂಸ ಡಾ||ನವರತ್ನ.ಎಸ್.ರಾಜರಾಮ್ ನಿಧನ!!

ಬೆಂಗಳೂರು:

      ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಾಜಿ ವಿಜ್ಞಾನಿ, ಹಿಂದು ಪರ ಪ್ರತಿಪಾದಕ, ವಿದ್ವಾಂಸ, ಇತಿಹಾಸ ತಜ್ಞ ಡಾ. ನವರತ್ನ ಶ್ರೀನಿವಾಸ ರಾಜರಾಮ್ಅ ವರು ನಿಧನರಾಗಿದ್ದಾರೆ.

      ಅವರಿಗೆ 76 ವರ್ಷ ವಯಸ್ಸಾಗಿತ್ತು. ಮೈಸೂರಿನಲ್ಲಿ 1943ರಲ್ಲಿ ಜನಿಸಿದ ರಾಜರಾಮ್ ಅವರು ಸಾಹಿತಿ ನವರತ್ನ ರಾಮರಾಯರ ಮೊಮ್ಮಗ.

      ಉತ್ತರ ಕರ್ನಾಟಕದ ದೇಶಸ್ಥ ಬ್ರಾಹ್ಮಣ ಕುಟುಂಬಕ್ಕೆ ಸೇರಿದವರಾದ ಇವರ ಪೂರ್ವಜರು ಒಂದು ತಲೆಮಾರಿನಲ್ಲಿ ಒಂಬತ್ತು ಜನ ವಿದ್ವಾಂಸರನ್ನು ಹೊಂದಿದ್ದರಿಂದ ”ನವರತ್ನ” ಎಂಬ ಬಿರುದು ಇವರ ವಂಶಕ್ಕೆ ಸೇರಿಕೊಂಡಿದೆ.

      ಅಮೆರಿಕದ ಇಂಡಿಯಾನಾ ವಿಶ್ವವಿದ್ಯಾಲಯದಲ್ಲಿ ಗಣಿತದಲ್ಲಿ ಪಿಎಚ್ ಡಿ ಪಡೆದು, 20 ವರ್ಷಗಳ ಕಾಲ ಪ್ರಾಧ್ಯಾಪಕರಾಗಿದ್ದರು. ಭಾರತದ ಮೂಲ ನಿವಾಸಿಗಳು, ಇತಿಹಾಸದ ಬಗ್ಗೆ ಅನೇಕ ಪುಸ್ತಕಗಳನ್ನು ಹೊರತಂದು ಚರ್ಚೆ ಹುಟ್ಟು ಹಾಕಿದ್ದರು. ಆರ್ಯರು ಭಾರತದ ಮೂಲ ನಿವಾಸಿಗಳೇ ಎಂಬ ಚರ್ಚೆ ಸರಿಯಲ್ಲ ಎಂದು ಪ್ರತಿಪಾದಿಸಿದರು.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap