ಸರಣಿ ಸ್ಫೋಟ : 4 ಮಂದಿ ಸಾವು!!!

ಕಠ್ಮಂಡು:

      ನೇಪಾಳದಲ್ಲಿ ನಿನ್ನೆ ನಡೆದ ಸರಣಿ ಸ್ಫೋಟದಿಂದಾಗಿ ನಾಲ್ಕು ಮಂದಿ ಸಾವನ್ನಪ್ಪಿದ್ದು, ಹಲವರು ಗಂಭೀರ ಗಾಯಗೊಂಡಿದ್ದಾರೆ.

      ಭಾರತದ ನೆರೆಯ ದೇಶ ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಭಾನುವಾರ 3 ಸರಣಿ ಸ್ಫೋಟಗಳು ಸಂಭವಿಸಿದ್ದು ನೇಪಾಳ ಜನತೆಯನ್ನು ಬೆಚ್ಚಿ ಬೀಳಿಸಿದೆ.

      ಮನೆಯೊಂದರಲ್ಲಿ ಸಂಭವಿಸಿರುವ ಸ್ಫೋಟದಲ್ಲಿ ನಿವಾಸಿಯೊಬ್ಬರು ಬಲಿಯಾಗಿದ್ದಾರೆ. ಸ್ಫೋಟದಿಂದಾಗಿ ಮನೆಯ ಗೋಡೆಗಳು ಕುಸಿದಿದೆ. ಇದರ ಬಳಿಕ ಕಠ್ಮಂಡು ನಗರದ ಹೊರವಲಯದಲ್ಲಿರುವ ಸುಖೇದಾದಲ್ಲಿ ಎರಡನೇ ಸ್ಫೋಟ ಸಂಭವಿಸಿದ್ದು, ಥಾಂಕೋಟ್ ಪ್ರದೇಶದಲ್ಲಿ ಮೂರನೇ ಸ್ಫೋಟ ನಡೆದಿದೆ.

      ಈಗಾಗಲೇ ಶಂಕಿತ 7 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಸ್ಫೋಟಗಳ ಬಗ್ಗೆ ತನಿಖೆಯನ್ನು ಆರಂಭಿಸಲಾಗಿದೆ. ಅಲ್ಲದೆ ಗಾಯಗೊಂಡವರಿಗೆ ಕಠ್ಮಂಡುವಿನ ಎರಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

       ಈ ಸ್ಫೋಟಗಳ ಹಿಂದೆ ಮಾವೋವಾದಿ ಸಂಘಟನೆಗಳ ಕೈವಾಡ ಇರುವ ಬಗ್ಗೆ ಶಂಕೆ ವ್ಯಕ್ತವಾಗುತ್ತಿದ್ದು, ಸ್ಫೋಟದ ಹಿಂದಿನ ಕಾರಣ ತಿಳಿಯಲು ತನಿಖೆ ಮುಂದುವರಿಸಿದ್ದೇವೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link