ಶ್ರೀನಗರ:
ಜಮ್ಮು-ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಮನೆಯೊಂದರ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಗೆ ಓರ್ವ ಹೆಣ್ಣುಮಗು ಸಹಿತ ಒಂದೇ ಕುಟುಂಬದ ನಾಲ್ವರು ಸದಸ್ಯರು ಗಾಯಗೊಂಡಿರುವ ಘಟನೆ ಉತ್ತಮ ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
Merciless act of terrorism. https://t.co/Bv1ltTHawF
— J&K Police (@JmuKmrPolice) September 7, 2019
ಸೋಪೊರ್‌ನ ಡಂಗೆರ್‌ಪೊರಾ ಗ್ರಾಮದಲ್ಲಿ ಉಸ್ಮಾ ಜಾನ್ ಎಂಬ ಹೆಣ್ಣು ಮಗು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಎಲ್ಲರ ಪರಿಸ್ಥಿತಿ ಸ್ಥಿರವಾಗಿದೆ” ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಜಮ್ಮು-ಕಾಶ್ಮೀರ ಪೊಲೀಸರು ಆಗಮಿಸಿದ್ದು, ಪರಿಶೀಲನೆ ನಡೆಸಿದ್ದಾರೆ. ಭಯೋತ್ಪಾದಕರು ಜನರಲ್ಲಿ ಭಯ ಹುಟ್ಟಿಸಲು ಹಾಗೂ ಕಣಿವೆ ರಾಜ್ಯದ ಶಾಂತಿಯನ್ನು ಭಂಗಗೊಳಿಸಲು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.