ಪ್ಯಾರಿಸ್:
ಫ್ರೆಂಚ್ ಕಾರು ತಯಾರಕ ರೆನಾಲ್ಟ್ ವಿಶ್ವದಾದ್ಯಂತ 15,000 ಉದ್ಯೋಗ ಕಡಿತಗೊಳಿಸುವುದಾಗಿ ಘೋಷಿಸಿದೆ.
ಮುಂದಿನ ಮೂರು ವರ್ಷಗಳಲ್ಲಿ 2 ಬಿಲಿಯನ್ ಯುರೋ ವೆಚ್ಚ ಕಡಿತ ಯೋಜನೆಯ ಭಾಗವಾಗಿ ಫ್ರಾನ್ಸ್ ನಲ್ಲಿಯೇ ಸುಮಾರು 4,600 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು ವಿಶ್ವದಾದ್ಯಂತ ಇತರೆ 10 ಸಾವಿರ ಉದ್ಯೋಗ ಕಡಿತಗೊಳಿಸುವುದಾಗಿ ಎಂದು ರೆನಾಲ್ಟ್ ತಿಳಿಸಿದೆ.
ಕಂಪನಿಯ ಸುಸ್ಥಿರತೆ ಮತ್ತು ದೀರ್ಘಾವಧಿಯಲ್ಲಿ ಅದರ ಅಭಿವೃದ್ಧಿಯನ್ನ ಖಚಿತಪಡಿಸಿಕೊಳ್ಳಲು ಯೋಜಿತ ಬದಲಾವಣೆಗಳು ಅಗತ್ಯವಾಗಿದೆ. ವಿಶ್ವಾದ್ಯಂತ 1,80,000 ಕಾರ್ಮಿಕರನ್ನು ನೇಮಿಸಿಕೊಂಡಿದ್ದೇವೆ. ಮೊರಾಕ್ಕೋ ಮತ್ತು ರೊಮೇನಿಯಾದಲ್ಲಿ ಯೋಜಿತ ಸಾಮರ್ಥ್ಯ ಹೆಚ್ಚಿಸುವ ಯೋಜನೆಗಳನ್ನು ಸ್ಥಗಿತಗೊಳಿಸುತ್ತಿದ್ದೇವೆ ಎಂದು ರೆನಾಲ್ಟ್ ನಿರ್ದೇಶಕರ ಮಂಡಳಿಯ ಅಧ್ಯಕ್ಷ ಜೀನ್ ಡೊಮಿನಿಕ್ ಸೆನಾರ್ಡ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ