ಗೋ-ಕಾರ್ಟ್​ ಚಕ್ರಕ್ಕೆ ಕೂದಲು ಸಿಲುಕಿ 23 ವರ್ಷದ ಯುವತಿ ಸಾವು!!

ಹೈದರಾಬಾದ್ :

     ಗೋ-ಕಾರ್ಟ್ ಚಲಾಯಿಸುತ್ತಿದ್ದ ವೇಳೆ  ಯುವತಿಯ ಕೂದಲು ಚಕ್ರಕ್ಕೆ ಸಿಲುಕಿ, 23 ವರ್ಷದ
ಎಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ 
ಹೈದರಾಬಾದ್‌ನ ಹೊರವಲಯದಲ್ಲಿ ನಡೆದಿದೆ.

     ಮೃತ ವಿದ್ಯಾರ್ಥಿನಿ ಶ್ರೀವರ್ಣಿನಿ ರಂಗ ರೆಡ್ಡಿ ಜಿಲ್ಲೆಯ ಗುರ್ರಾಮ್ ಗುಡಾದಲ್ಲಿರುವ ಮನೋರಂಜನಾ ಉದ್ಯಾನವನದಲ್ಲಿ ತನ್ನ ಸ್ನೇಹಿತರೊಂದಿಗೆ ಗೋ-ಕಾರ್ಟಿಂಗ್ಗಾಗಿ ಹೋಗಿದ್ದರು ಈ ವೇಳೆ ಈ ದುರಂತ ಸಂಭವಿಸಿದೆ.

     ಚಾಲನೆ ಮಾಡುವಾಗ ಅವಳ ಕೂದಲು  ಸಿಲುಕಿಕೊಂಡಿತ್ತು. ಇದರಿಂದ ಕೆಳಗೆ ಬಿದ್ದ ಆಕೆಯ ಹೆಲ್ಮೆಟ್​ ಹಾರಿಹೋಗಿ, ತಲೆಗೆ ಗಂಭೀರ ಗಾಯಗಳಾಗಿತ್ತು.

     ತಕ್ಷಣ ಆಕೆಯನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ತಲೆಗೆ ಗಂಭೀರ ಗಾಯಗಳಾಗಿದ್ದರಿಂದ ಆಕೆ ಗುರುವಾರ ಮೃತಪಟ್ಟಿದ್ದಾಳೆ. ತಮ್ಮ ಕಣ್ಣೆದುರೇ ಮಗಳು ಸಾವನ್ನಪ್ಪಿದ್ದನ್ನು ಕಂಡು ಆಕೆ ಅಪ್ಪ-ಅಮ್ಮ ಆಘಾತಕ್ಕೀಡಾಗಿದ್ದರು.

    ಆಕೆಯ ಪೋಷಕರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಗೋ-ಕಾರ್ಟಿಂಗ್ ಆಯೋಜಕರ ನಿರ್ಲಕ್ಷ್ಯದಿಂದ ತಮ್ಮ ಮಗಳು ಸಾವನ್ನಪ್ಪಿದ್ದಾಳೆ. ಅಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿರಲಿಲ್ಲ ಎಂದು ಆರೋಪಿಸಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap