ದೆಹಲಿ :
ಗೋವಾದ ಇಬ್ಬರು ಕಾಂಗ್ರೆಸ್ಶಾಸಕರು ಸೋಮವಾರ ರಾತ್ರಿ ಹಠಾತ್ತಾಗಿ ದೆಲ್ಲಿಗೆ ದೌಡಾಯಿಸಿದ್ದು, ಕಾಂಗ್ರೆಸ್ ಶಾಸಕರಾಗಿದ್ದ ದಯಾನಂದ್ ಸೊಪ್ಟೆ ಮತ್ತು ಸುಭಾಶ್ ಶಿರೋಡ್ಕರ್ ರಿಸೈನ್ ಮಾಡಿ, ಬಿಜೆಪಿ ಸೇರಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಪರ್ರೀಕರ್ ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭವನ್ನೇ ಬಳಸಿಕೊಂಡು ಗೋವಾದಲ್ಲಿನ ಬಿಜೆಪಿ ಮೈತ್ರಿ ಸರ್ಕಾರ ಉರುಳಿಸಿ ಹೊಸ ಸರ್ಕಾರ ರಚನೆಯ ಕನಸು ಕಂಡಿದ್ದ ಕಾಂಗ್ರೆಸ್‌ಗೆ, ಅವರದೇ ಪಕ್ಷದ ಶಾಸಕರು ಆಘಾತ ನೀಡಿದ್ದಾರೆ.
ನಿನ್ನೆ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಇಬ್ಬರು ನಾಯಕರು ರಾತ್ರೋರಾತ್ರಿ ದೆಹಲಿ ಪ್ರಯಾಣ ಬೆಳೆಸಿದ್ದರು. ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನ ಭೇಟಿ ಮಾಡಿ, ಬಿಜೆಪಿಯನ್ನ ಸೇರಿಕೊಂಡಿದ್ದಾರೆ. ಈ ಮೂಲಕ 40 ವಿಧಾನಸಭಾ ಕ್ಷೇತ್ರಗಳಿರುವ ಗೋವಾ ವಿಧಾನಭೆಯಲ್ಲಿ ಕಾಂಗ್ರೆಸ್ನ ಶಾಸಕರ ಸಂಖ್ಯೆ 16 ರಿಂದ 14ಕ್ಕೆ ಕುಸಿದಿದೆ.
ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಹವಣಿಕೆಯಲ್ಲಿರುವ ಬಿಜೆಪಿ ತನ್ನ ಸಂಖ್ಯಾಬಲ ಹೆಚ್ಚಿಸಿಕೊಳ್ಳುವ ಸನ್ನಾಹದಲ್ಲಿದೆ ಎಂದು ಅಕ್ಟೋಬರ್ 15ರಂದು ವರದಿಯಾಗಿದ್ದು, ಈ ದಿಶೆಯಲ್ಲಿ ಶಾಸಕರಿಬ್ಬರ ದೆಹಲಿ ಪ್ರಯಾಣ ಗಮನ ಸೆಳೆದಿದೆ.