ಪಣಜಿ:
ಮೇದೋಜೀರಕ ಗ್ರಂಥಿಯ ಕ್ಯಾನ್ಸರ್ನಿಂದ ಬಳಲುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಸೋಮವಾರ ‘ವಿಶ್ವ ಕ್ಯಾನ್ಸರ್ ದಿನ’ದ ಹಿನ್ನಲೆಯಲ್ಲಿ ‘ಮನುಷ್ಯ ಮನಸ್ಸು ಮಾಡಿದರೆ ಎಂತಹ ರೋಗವನ್ನಾದರೂ ಮೆಟ್ಟಿ ನಿಲ್ಲಬಹುದು’ ಎಂದು ಟ್ವೀಟ್ ಮಾಡುವ ಮೂಲಕ 63 ವರ್ಷದ ಪರಿಕ್ಕರ್ ಆಸ್ಪತ್ರೆಯಿಂದಲೇ ಸಂದೇಶ ನೀಡಿದ್ದರು.
ಕಳೆದ ಗುರುವಾರ ಪರಿಕ್ಕರ್ ಅವರನ್ನು ಏಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇಂದು ಏಮ್ಸ್ ಆಸ್ಪತ್ರೆಗೆ ಹಲವು ಗಣ್ಯರು ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಪರಿಕ್ಕರ್ ಅನಾರೋಗ್ಯದ ನಡುವೆಯೂ ಎದೆಗುಂದದೆ ಸರ್ಕಾರ, ಆಡಳಿತವನ್ನು ನಿರ್ವಹಿಸುತ್ತಿದ್ದಾರೆ. ಕಳೆದ ವಾರವಷ್ಟೇ ತಮ್ಮ ಅನಾರೋಗ್ಯದ ನಡುವೆಯೂ ಮೂಗಿಗೆ ಪೈಪ್ ಹಾಕಿಕೊಂಡೇ ಗೋವಾ ವಿಧಾನಸಭೆಯಲ್ಲಿ ಬಜೆಟ್ ಮಂಡಿಸಿದ್ದರು.
ಗುಣಪಡಿಸಲಾಗದ ಸಮಸ್ಯೆಯಿಂದ ಪರಿಕ್ಕರ್ ಬಳಲುತ್ತಿದ್ದು, ದೇವರ ಆಶೀರ್ವಾದಿಂದ ಅವರು ಅವರು ಬದುಕುತ್ತಿದ್ದಾರೆ. ಕೆಲಸ ಮಾಡಲೆಂದೇ ದೇವರು ಅವರಿಗೆ ಆಶೀರ್ವಾದ ಮಾಡಿದ್ದಾರೆ ಎಂದು ಗೋವಾ ಡೆಪ್ಯುಟಿ ಸ್ಪೀಕರ್ ಹಾಗೂ ಬಿಜೆಪಿ ಶಾಸಕ ಮೈಕೆಲ್ ಲೋಬೋ ಹೇಳಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ