ಸಿನಿಮಾ ಟಿಕೆಟ್ ದರ ಕಡಿತ!!

      ಸಿನಿ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, 100 ರೂ. ತನಕದ ಟಿಕೆಟ್ ಮೇಲೆ ಶೇ.18ರಷ್ಟಿದ್ದ ಜಿಎಸ್‍ಟಿಯನ್ನು ಶೇ.12ಕ್ಕೆ ಇಳಿಸಲಾಗಿದೆ. ಹೊಸ ವರ್ಷದ ಮೊದಲ ದಿನವಾದ ಇಂದಿನಿಂದ ಜಿಎಸ್‍ಟಿ ಮಂಡಳಿ ಘೋಷಿಸಿದ್ದ ಸೇವೆಗಳ ಮೇಲಿನ ತೆರಿಗೆ  ಇಳಿಕೆ ಜಾರಿಗೆ ಬರಲಿದೆ.

      ಹೊಸ ವರ್ಷಕ್ಕೆ ಪೆಟ್ರೋಲ್, ಡೀಸೆಲ್, ಎಲ್‍ಪಿಜಿ ದರ ಇಳಿಕೆಯಾಗುವುದರ ಜೊತೆಗೆ ಇಂದಿನಿಂದ 23 ವಸ್ತುಗಳ ಬೆಲೆಯೂ ಕಡಿಮೆಯಾಗಲಿದೆ. 

Related image

      100 ರೂ.ಗಿಂತ ಹೆಚ್ಚಿನ ದರದ ಟಿಕೆಟ್ ಮೇಲೆ ಶೇ.28ರಷ್ಟಿದ್ದ ಜಿಎಸ್‍ಟಿ ಶೇ.18ಕ್ಕೆ ತಗ್ಗಿದೆ. ಸರಕು ಸಾಗಣೆ ವಾಹನಗಳ ಮೇಲಿನ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಪ್ರೀಮಿಯಂ ಮೊದಲಾದವುಗಳ ಮೇಲಿದ್ದ ತೆರಿಗೆ ಶೇ.18 ರಿಂದ ಶೇ.12ಕ್ಕೆ ಇಳಿಕೆಯಾಗಿದೆ.

      ಕಳೆದ ಡಿ.22ರಂದು ಸಭೆ ಸೇರಿದ್ದ ಜಿಎಸ್‍ಟಿ ಮಂಡಳಿ ದರ ಇಳಿಕೆಗೆ ನಿರ್ಧಾರ ಕೈಗೊಂಡಿತ್ತು. ಈ ನಿರ್ಧಾರದಿಂದಾಗಿ ಶೇ.28 ತೆರಿಗೆ ದರ ಹೊಂದಿರುವ ವಸ್ತುಗಳ ಸಂಖ್ಯೆ ಸದ್ಯ 28ಕ್ಕೆ ಇಳಿಕೆಯಾಗಿದೆ. 2017ರ ಜು.1ರಂದು ಜಿಎಸ್‍ಟಿ ಜಾರಿಯಾದಾಗ ಶೇ.28ರ ತೆರಿಗೆ ವ್ಯಾಪ್ತಿಯಲ್ಲಿ 226 ಸರಕುಗಳು ಇದ್ದವು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap