ರಸಗೊಬ್ಬರದ ಮೇಲಿನ ಸಬ್ಸಿಡಿ ಹೆಚ್ಚಳ!!

ನವದೆಹಲಿ :

     ಕೇಂದ್ರ ಸರ್ಕಾರವು ರೈತರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, ಯುರಿಯಾಯೇತರ ರಸಗೊಬ್ಬರಗಳ ಮೇಲಿನ ಸಬ್ಸಿಡಿಯನ್ನು ಕೇಂದ್ರ ಸರ್ಕಾರವು ಹೆಚ್ಚಳ ಮಾಡಿದೆ.

      ರೈತರಿಗೆ ಕೈಗೆಟುಕುವ ಬೆಲೆಯಲ್ಲಿ ಕೃಷಿ ಗೊಬ್ಬರ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದ್ದು, ಕೇಂದ್ರದ ಬೊಕ್ಕಸಕ್ಕೆ ಪ್ರಸಕ್ತ ಹಣಕಾಸು ವರ್ಷದಲ್ಲಿ 22,875.50 ಕೋಟಿ ರೂ. ಹೊರೆ ಬೀಳಲಿದೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಹಣಕಾಸು ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಹೊರಬಿದ್ದಿದೆ.

      ಫಾಸ್ಟೆಟಿಕ್ ಮತ್ತು ಪೋಟ್ಯಾಸಿಕ್ ರಸಗೊಬ್ಬರಗಳಿಗೆ 2019-20 ರಲ್ಲಿ ಸಬ್ಸಡಿಯನ್ನು ಹೆಚ್ಚಿಸಲಾಗಿದೆ. ಸಬ್ಸಿಡಿಯನ್ನು ಕೆ.ಜಿ. ನೈಟ್ರೋಜನ್ ಗೆ 18.90, ಫಾಸ್ಫರಸ್ ಗೆ 15,11 ರೂ, ಪೋಟಾಷ್ ಗೆ ರೂ. 11.12, ಸಲ್ಫರ್ ಗೆ ರೂ. 3.56 ರೂ. ಹೆಚ್ಚಿಸಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್ ಮಾಹಿತಿ ನೀಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ