12 ಕೋನದ ಪಾಲಿಗಾನ್ ಆಕೃತಿಯುಳ್ಳ ಹೊಚ್ಚ ಹೊಸ 20 ರು ನಾಣ್ಯ ಉತ್ಪಾದನೆ ಕುರಿತಂತೆ ವಿತ್ತ ಸಚಿವಾಲಯವು ಪ್ರಕಟಣೆ ಹೊರಡಿಸಿದೆ.
8.54 ಗ್ರಾಂ ತೂಕದ 20 ರೂ. ನಾಣ್ಯದ ಮುಂಭಾಗದಲ್ಲಿ ನಾಲ್ಕು ಸಿಂಹಗಳ ಲಾಂಛನ, ಅಶೋಕನ ಸಾರಾನಾಥ ಶಾಸನದ ‘ಸತ್ಯಮೇವ ಜಯತೆ’ ಅಚ್ಚಾಗಿದೆ. ಎಡ ಭಾಗದಲ್ಲಿ ‘ಭಾರತ್’ ಎನ್ನುವ ಹಿಂದಿ ಭಾಷಾ ಪದವಿದ್ದು, ಬಲಭಾಗದಲ್ಲಿ ‘ಇಂಡಿಯಾ’ ಎಂಬ ಇಂಗ್ಲಿಷ್ ಬರಹವಿದೆ.
ಕೃಷಿ ಪ್ರಧಾನ ಭಾರತದಲ್ಲಿ ಅದರ ಮಹತ್ವ ಸಾರುವ ಉದ್ದೇಶದಿಂದ ನಾಣ್ಯದ ಹಿಂಬದಿಯಲ್ಲಿ ಧಾನ್ಯಗಳ ಚಿತ್ರ ವಿನ್ಯಾಸಗೊಳಿಸಲಾಗಿದೆ. ಜೊತೆಗೆ ಹಿಂದಿ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ 20 ರೂಪಾಯಿಗಳು ಎಂದು ಅಕ್ಷರಗಳಲ್ಲಿ ಬರೆಯಲಾಗಿದೆ. ಇದರ ಮಧ್ಯದಲ್ಲಿ ನಾಣ್ಯ ಬಿಡುಗಡೆಯಾದ ವರ್ಷವನ್ನು ಸಹ ಮುದ್ರಿತವಾಗಿದೆ.