ದೆಹಲಿ :
ವಿದ್ಯುತ್ ಚಾಲಿತ ವಾಹನಗಳ ಜಿಎಸ್ಟಿ ದರವನ್ನು ಶೇ.12ರಿಂದ ಶೇ.5ಕ್ಕೆ ಇಳಿಸಲು ಜಿಎಸ್ಟಿ ಕೌನ್ಸಿಲ್ ಶನಿವಾರ ನಿರ್ಧರಿಸಿದೆ.
ವಾಯು ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಯೋಜನೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಇಂದು ನಡೆದ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದು, ವಿದ್ಯುತ್ ಚಾಲಿತ ವಾಹನಗಳಲ್ಲಿ ಬಳಸುವ ಚಾರ್ಜರ್ಗಳ ಜಿಎಸ್ಟಿ ದರವನ್ನು ಸಹಾ ಶೇ.18ರಿಂದ 5ಕ್ಕೆ ಇಳಿಸಲು ನಿರ್ಧರಿಸಲಾಗಿದೆ
ದರ ಇಳಿಕೆಯು ಆಗಸ್ಟ್ 1ರಿಂದ ಜಾರಿಗೆ ಬರಲಿದೆ ಎಂದು 36ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಸ್ಥಳೀಯ ಪ್ರಾಧಿಕಾರಿಗಳು ವಿದ್ಯುತ್ ಚಾಲಿತ ಬಸ್ಗಳ ಬಾಡಿಗೆ ಪಡೆಯುವುದಕ್ಕೆ ಜಿಎಸ್ಟಿಯಿಂದ ವಿನಾಯತಿ ನೀಡುವುದಕ್ಕೂ ಕೌನ್ಸಿಲ್ ಅನುಮತಿ ನೀಡಿದೆ.
ಇದರಿಂದ ವಿದ್ಯುತ್ ವಾಹನ ಖರೀದಿಗೆ ಮತ್ತಷ್ಟು ಉತ್ತೇಜನ ಲಭಿಸಿದಂತಾಗಿದ್ದು, ಇದೊಂದು ಭಾರತದ ಎಲೆಕ್ಟ್ರಾನಿಕ್ ವಾಹನಗಳ ಉತ್ಪಾದನಾ ಕ್ಷೇತ್ರದಲ್ಲಿನ ಮಹತ್ವದ ಬೆಳವಣಿಗೆಗೆ ಸಾಕ್ಷಿಯಾಗಲಿದೆ ಎನ್ನಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ