ಸನಾತನ ಸಂಸ್ಕೃತಿ ಉಳಿಸಿ ಬೆಳೆಸಲು ಕರೆ

ಗುಬ್ಬಿ
  ಭಾರತಿಯ ಸಂಸ್ಕೃತಿ  ಪರಂಪರೆಗೆ ಮಹತ್ವದ ಸ್ಥಾನವಿದ್ದು ನಮ್ಮ ಸನಾತನ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸಿ ಬೆಳೆಸುವತ್ತ ಮುಂದಾಗಬೇಕಿದೆ ಎಂದು ನೃತ್ಯ ಕಲಾವಿದೆ ವೀಣಾಮೂರ್ತಿವಿಜಯ್ ತಿಳಿಸಿದರು.

  ಪಟ್ಟಣದ ಡಾ:ಗುಬ್ಬಿ ವೀರಣ್ಣ ರಂಗ ಮಂದಿರದಲ್ಲಿ ನಡೆಯುತ್ತಿರುವ ಜೀವಿತನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಡಾ:ಗುಬ್ಬಿ ವೀರಣ್ಣನವರಂತಹ ದಿಗ್ಗಜರು ರಂಗಕಲೆ ಮತ್ತು ರಂಗನಾಟಕಗಳ ಬೆಳವಣಿಗೆಗೆ ಹತ್ತು ಹಲವು ರಂಗ ಪ್ರಯೋಗಗಳನ್ನು ನಡೆಸುವ ಮೂಲಕ ಇಡೀ ವಿಶ್ವಕ್ಕೆ ರಂಗ ನಾಟಕಗಳಿಗೆ ಹೊಸ ಆಯಾಮ ನೀಡಿದ್ದಾರೆ. ಪ್ರಸ್ತುತ ದಿನಗಳಲ್ಲಿ ಮರೆಯಾಗುತ್ತಿರುವ ರಂಗ ನಾಟಕಗಳು ಮತ್ತು ನೃತ್ಯ ಕಲೆಗಳನ್ನು ಉಳಿಸಿ ಬೆಳೆಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡುವಂತೆ ತಿಳಿಸಿದರು.

   ನಾನು ನನ್ನ 16 ನೇ ವಯಸ್ಸಿನಿಂದಲೇ ಕಥಕ್‍ನೃತ್ಯ ಕಲಿತಿದ್ದೇನೆ. ಹಲವು ಪುರಸ್ಕಾರಗಳು ದೊರೆತಿವೆ. ಆದರೆ ಇಂದು ಇಲ್ಲಿಗೆ ಬಂದು ನೃತ್ಯ ಕರ್ಯಕ್ರಮ ನೀಡುತ್ತಿರುವುದು ಎಲ್ಲದಕ್ಕಿಂತ ದೊಡ್ಡ ಗೌರವ ಬಂದಂತಾಗಿದೆ ಎಂದ ಅವರು, ದೇವಾಲಯದ ಕಥಕ್‍ನೃತ್ಯ ಬಹಳ ವರ್ಷಗಳಿಂದ ಇರುವಂತದ್ದು ಬಹುತೇಕ ಪುರಾತನ ದೇವಸ್ಥಾನದಲ್ಲಿನ ಗೋಡೆಗಳ ಮೇಲೆ ಇಂದಿಗೂ ಈ ನೃತ್ಯ ಗಮನಿಸಬಹುದು. ಅಂದಿನಿಂದ ಇಂದಿನ ವರೆಗೂ ಈ ನೃತ್ಯದ ಪ್ರಕಾರ ಮುಂದುವರಿದುಕೊಂಡು ಬಂದಿದೆ ಎಂದು ತಿಳಿಸಿದರು. ಒಂದು ಸಂಸ್ಕೃತಿ , ಸಂಸ್ಕಾರ, ಪರಂಪರೆಯ ದೇಶ ಮತ್ತೊಂದಿಲ್ಲ. ಗುಬ್ಬಿಯಂತಹ ಊರಿನಲ್ಲಿ ಸುಂದರವಾದ ರಂಗಭೂಮಿ ಥಿಯೇಟರ್ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಂತಹ ನಗರದಲ್ಲೆ ಇಂತಹ ಸುಸಜ್ಜಿತವಾದ ರಂಗ ಮಂದಿರ ಇಲ್ಲಾ ಎಂದು ತಿಳಿಸಿದರು.

  ಡಾ:ಗುಬ್ಬಿ ವೀರಣ್ಣ ಟ್ರಸ್ಟ್‍ನ ಅಧ್ಯಕ್ಷೆ ಡಾ:ಬಿ.ಜಯಶ್ರೀ ಮಾತನಾಡಿ ನೃತ್ಯದ ತರಬೇತಿ ಕಾರ್ಯಕ್ರಮ ಆಯೋಜನೆ ಮಾಡಿರುವುದು ನಿಮಗಾಗಿ. ಈ ವೇದಿಕೆಯಲ್ಲಿ ರಾಷ್ಟ್ರ, ಮಟ್ಟದ ಅಂತರರಾಷ್ಟ್ರೀಯ ಮಟ್ಟದ ಕಲಾವಿದರು ಸಹ ಬಂದು ಹೋಗಿದ್ದಾರೆ. ಅದರಂತೆ ಈ ನಾಲ್ಕು ದಿನಗಳು ಸಹ ವಿಶೇಷವಾದ ನೃತ್ಯ ಕಲಾವಿದರು ಆಗಮಿಸಿ ಪ್ರದರ್ಶನ ನೀಡಲಿದ್ದಾರೆ. ತಾವೆಲ್ಲ ಅವರನ್ನು ಬೇರೆ ಕಡೆ ಹೋಗಿ ನೋಡುವುದು ಕಷ್ಟ. ಹಾಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿ ಮಾಡಿ ಹಾಗೂ ಮುಂದಿನ ತಿಂಗಳು ಸಂಗೀತಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಮತ್ತು ಸಂಗೀತದ ಶಾಲೆಗಳನ್ನು ಸಹ ತೆರೆಯಲಾಗುತ್ತದೆ ಎಂದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap