4 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಆತ್ಮಹತ್ಯೆ!!

ಮಧ್ಯಪ್ರದೇಶ :

      ನಾಲ್ಕು ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ಖರ್ಗಾಪುರದಲ್ಲಿ ನಡೆದಿದೆ.

      ಮೃತರನ್ನು ಧರ್ಮದಾಸ್ ಸೋನಿ (62), ಪುಣೆ ಸೋನಿ (55), ಮನೋಹರ್ ಸೋನಿ (27), ಸೋನಮ್ ಸೋನಿ (25) ಹಾಗೂ ಸಾನಿಧ್ (4) ಎಂದು ಗುರುತಿಸಲಾಗಿದೆ.

      ಟಿಕಮ್‍ಗರ್ ನ ಖರ್ಗಾಪುರ ನಗರದ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಐವರ ಮೃತದೇಹಗಳು ಪತ್ತೆಯಾಗಿವೆ.

     ಮನೆಗೆ ಹಾಲು ಹಾಕಲು ಹೋದ ವ್ಯಕ್ತಿ ಬಾಗಿಲು ಬಾಕಿದಾಗ ಬಾಗಿಲು ತೆರೆಯದ ಸಂದರ್ಭ ವ್ಯಕ್ತಿ ಮನೆಯನ್ನು ಪರಿಶೀಲಿಸಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳು ಕಂಡು ಬಂದಿವೆ.

      ಕೂಡಲೇ ಆ ವ್ಯಕ್ತಿ ತಿಕಮ್ ಘರ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮನೆಯ ಬಾಗಿಲು ಒಡೆದು ಒಳಪ್ರವೇಶಿಸಿ ಪರಿಶೀಲಿಸಿದಾಗ ಮನೆಯ ಐದು ಮಂದಿಯ ಮೃತದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ. ಇನ್ನು ಇವರ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ.

      ಸದ್ಯ ಘಟನಾ ಸ್ಥಳಕ್ಕೆ ಖರ್ಗಾಪುರ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸ್ಥಳೀಯ ಆಸ್ಪತ್ರೆಗೆ ರವಾನಿಸಲಾಗಿದೆ.

Recent Articles

spot_img

Related Stories

Share via
Copy link
Powered by Social Snap