ಪೆಟ್ರೋಲ್ ಬಂಕ್ ದರೋಡೆಯನ್ನೇ ಕಾಯಕ ಮಾಡಿಕೊಂಡಿದ್ದ ಖತರ್ನಾಕ್ ಗ್ಯಾಂಗ್ ಅರೆಸ್ಟ್

ಹಾಸನ: 

   ಸಮಾಜದಲ್ಲಿ ಪ್ರಾಮಾಣಿಕರ ರೀತಿ ಮುಖವಾಡ ಇಟ್ಟುಕೊಂಡಿದ್ದ ಬೆಳಗ್ಗೆಯಿಂದ ಸಂಜೆಯವರೆಗೆ ಆಟೋ ಓಡಿಸಿಕೊಂಡು, ಗ್ಯಾರೇಜ್​ನಲ್ಲಿ ಕೆಲಸ ಮಾಡಿಕೊಂಡು, ಅಂಗಡಿ ವ್ಯಾಪಾರ ಮಾಡಿಕೊಂಡಿದ್ದ  ಖದೀಮರ ಗ್ಯಾಂಗೊಂದು ರಾತ್ರಿವೇಳೆ  ಆಟ ಶುರು ಮಾಡುತ್ತಿತ್ತು. ಈ ಖದೀಮರು ಮೈಗೆ ಎಣ್ಣೆ ತಿಕ್ಕಿಕೊಂಡು ಕೈನಲ್ಲಿ ಲಾಂಗ್ ಹಿಡಿದು ರಾತ್ರಿ ಹೊತ್ತು  ಜನಸಂದಣಿ ಕಡಿಮೆ ಇರುವ ಪೆಟ್ರೋಲ್ ಬಂಕ್​ಗಳ ಟಾರ್ಗೆಟ್ ಮಾಡುತ್ತಿದ್ದ ಖತರ್ನಾಕ್ ಕಳ್ಳರು,   ಹಣ ದೋಚಿ ಪರಾರಿಯಾಗುತ್ತಿದ್ದರು.

   ಕಳೆದ ನವೆಂಬರ್ 26 ರಂದು ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹೀರಿಸಾವೆ ಬಳಿ ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಶ್ರೀ ಲಕ್ಷ್ಮೀ ರಂಗನಾಥ್ ಪೆಟ್ರೋಲ್ ಬಂಕ್​ಗೆ ನುಗ್ಗಿದ್ದ ಖದೀಮರು, ಲಾಂಗು ಮಚ್ಚು ತೋರಿಸಿ 2.2 ಲಕ್ಷ ಹಣ ದೋಚಿ ಪರಾರಿ ಆಗಿದ್ದರು.

  ಕಳ್ಳರ ಕೈ ಚಳಕದ ಕೃತ್ಯ ಸಿಸಿ ಕ್ಯಾಮರಾ ಕಣ್ಣಲ್ಲಿ ಸೆರೆ ಆಗಿತ್ತು. ಪೊಲೀಸರು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದರು. ಅದೇ ರೀತಿ ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ಒಟ್ಟು 12 ಕಡೆ ದರೋಡೆ ಮಾಡಿದ್ದ ಖದೀಮರು, ಡಿಸೆಂಬರ್ 3 ರಂದು ರಾಮನಗರದ ಬಿಡದಿಯಲ್ಲಿ ದರೋಡೆಗೆ ಯತ್ನಿಸಿ ರಾಮನಗರ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಒಟ್ಟು 9 ಮಂದಿಯ ಈ ಗ್ಯಾಂಗನ್ನ ಮಂಡ್ಯದ ಮಾರಸಹಳ್ಳಿ ಯೋಗಾನಂದ ಎಂಬಾತ ಲೀಡ್ ಮಾಡುತ್ತಿದ್ದ ಎಂಬುವುದು ತನಿಖೆಯಿಂದ ತಿಳಿದುಬಂದಿದ್ದು, ಮೂರು ಅಥವಾ ನಾಲ್ಕು ಮಂದಿ ಟೀಮ್ ಮಾಡಿಕೊಂಡು ದರೋಡೆಗೆ ಇಳಿಯುತ್ತಿದ್ದರು ಎನ್ನಲಾಗಿದೆ.

   ಇದೇ ಗ್ಯಾಂಗ್ ಎರಡು ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ, ಬೆಂಗಳೂರು ಮೂಲದ ಪಾರಿಜಾತ ರವಿ ಎಂಬುವವನ ಕೊಲೆಗೆ ಸ್ಕೆಚ್ ಹಾಕಿದ್ದ ವಿಚಾರವೂ ಬೆಳಕಿಗೆ ಬಂದಿದೆ. ಒಟ್ಟಾರೆ ದರೋಡೆಗೆ ಬಳಸುತ್ತಿದ್ದ ವಾಹನಗಳು ಹಾಗೂ ಆಯುಧಗಳನ್ನು ಪೊಲೀಸರು, ವಶಪಡಿಸಿಕೊಂಡಿದ್ದಾರೆ.

       ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap