ದೆಹಲಿ:
ಕರ್ನಾಟಕದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದಾರೆ. ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ಕಾಡುತ್ತಿದೆ. ಇದು ಮೈತ್ರಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಸ್ಥಿತಿ ಎಂದು ಚಾಟಿ ಬೀಸಿದರು.
ಅವರು ಇಂದು ನವದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುತ್ತಿರುವ ಪಕ್ಷದ ರಾಷ್ಟ್ರೀಯ ಪರಿಷತ್ ಸಮಾವೇಶದಲ್ಲಿ ಮಾತನಾಡಿದರು.
ಸಮ್ಮಿಶ್ರ ಸರ್ಕಾರದಲ್ಲಿ ಸದ್ಯಕ್ಕೆ ನಾನು ಕ್ಲರ್ಕ್ ತರ ಕೆಲಸ ಮಾಡುತ್ತಿದ್ದೇನೆ. ಕಾಂಗ್ರೆಸ್ ನೀಡುತ್ತಿರುವ ಕಿರುಕುಳವನ್ನು ಸಹಿಸಿಕೊಂಡಿದ್ದೇನೆ. ಲೋಕಸಭಾ ಚುನಾವಣೆವರೆಗೂ ಹಲ್ಲು ಕಚ್ಚಿ ಸರ್ಕಾರ ನಡೆಸುತ್ತೇನೆ ಎಂದು ಸಿಎಂ ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದ್ದರು.
ಇದನ್ನೇ ಪೂರಕವಾಗಿಟ್ಟುಕೊಂಡು ಕುಟುಕಿರುವ ಪ್ರಧಾನಿ ಕಾಂಗ್ರೆಸ್ ಕೈಯಲ್ಲಿ ಕುಮಾರಸ್ವಾಮಿ ಅಸಹಾಯಕರಾಗಿ ವಿಲವಿಲ ಒದ್ದಾಡುತ್ತಿದ್ದಾರೆ. ನಾನು ಮುಖ್ಯಮಂತ್ರಿಯಲ್ಲ, ಕ್ಲರ್ಕ್ ಎಂದು ಕುಮಾರಸ್ವಾಮಿಯೇ ಹೇಳಿರುವುದಾಗಿ ತಿಳಿಸಿದರು.
ಕರ್ನಾಟಕದಲ್ಲಿ ಇದು ಮೈತ್ರಿ ಟ್ರೇಲರ್ ಅಷ್ಟೇ. ಮೈತ್ರಿ ಸರ್ಕಾರಕ್ಕೆ ಕೆಲತಿಂಗಳಷ್ಟೇ ಆಗಿದೆ. ಎಚ್.ಡಿ.ಕುಮಾರಸ್ವಾಮಿಯನ್ನು ಸಿಎಂ ಬದಲು ಕ್ಲರ್ಕ್ ಮಾಡಲಾಗಿದೆ ಎಂದು ವ್ಯಂಗ್ಯವಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
