ಕೊರೊನಾ ಚಿಕಿತ್ಸೆ ನೀಡಲು ಹೋದ ವೈದ್ಯರ ಮೇಲೆ ಕಲ್ಲು ತೂರಾಟ!!!

ಇಂದೋರ್​ ​(ಮಧ್ಯಪ್ರದೇಶ):

      ಕೊರೊನಾ ವೈರಸ್​ ಸೋಂಕಿತರನ್ನು ಗುರುತಿಸಿ, ಆಸ್ಪತ್ರೆಗೆ ಸೇರಿಸುವ ಸಲುವಾಗಿ ತೆರಳಿದ್ದ ಆರೋಗ್ಯ ಇಲಾಖೆಯ ತಂಡದ ಮೇಲೆ ಕಲ್ಲು ತೂರಾಟ ನಡೆಸಿರುವ ಆಘಾತಕಾರಿ ಘಟನೆ ಇಂಧೋರ್​ನ ತಾಟ್ ಪಟ್ಟಿ ಬಾಖಲ್​ ಎಂಬಲ್ಲಿ ನಡೆದಿದೆ.

       ಹೌದು, ಕರೊನಾ ಸೋಂಕಿತರನ್ನು ಪತ್ತೆ ಹಚ್ಚಿ, ಅವರಿಗೆ ಚಿಕಿತ್ಸೆ ನೀಡುವ ಜತೆಗೆ ಉಳಿದವರನ್ನು ಕಾಪಾಡುವ ಸಲುವಾಗಿ ಮೂವರು ವೈದ್ಯರನ್ನೊಳಗೊಂಡ, ಒಟ್ಟು ಐವರು ಇರುವ ಆರೋಗ್ಯ ಇಲಾಖೆಯ ತಂಡ ಈ ಪ್ರದೇಶಕ್ಕೆ ಹೋಗಿತ್ತು. ಆದರೆ ಅಲ್ಲಿನ ಕೆಲವು ಸ್ಥಳೀಯರು ತಮ್ಮನ್ನು ಬಿಡುವಂತೆ ಒತ್ತಾಯ ಮಾಡುತ್ತಿದ್ದಾರೆ. ಜೊತೆಗೆ ತಮಗೆ ಚಿಕಿತ್ಸೆ ನೀಡಲು ಬಂದ ವೈದ್ಯಕೀಯ ಸಿಬ್ಬಂದಿ ಮುಖಕ್ಕೆ ಉಗಿದು, ವೈದ್ಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಜೊತೆಗೆ ಊಟದ ವಿಚಾರದಲ್ಲೂ ಜಗಳ ಮಾಡಿ ಅಮಾನವೀಯವಾಗಿ ವರ್ತನೆ ತೋರಿದ್ದಾರೆ.

      ಈ ವೇಳೆ ಇಬ್ಬರು ಮಹಿಳಾ ವೈದ್ಯರು ತಹಸೀಲ್ದಾರ್​ ಅವರ ವಾಹನದಲ್ಲಿ ಅಡಗಿ ಕುಳಿತು, ಕಲ್ಲು ತೂರುವವರಿಂದ ಬಚಾವ್​ ಆಗಿದ್ದಾರೆ.
ಚತ್ರಿಪುರ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರತಿಭಟನೆ ಮಾಡುತ್ತಿದ್ದ ಜನರು ಪೊಲೀಸ್​ ಬ್ಯಾರಿಕೇಡ್​ಗಳನ್ನು ಮುರಿದಿದ್ದಾರೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರ ಗುರುತು ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

     ಅಲ್ಲಿಗೆ ಭೇಟಿ ಕೊಟ್ಟಿದ್ದ ಮಹಿಳಾ ವೈದ್ಯರೋರ್ವರು ಘಟನೆಯನ್ನು ವಿವರಿಸಿದ್ದು, ಸ್ಥಳಕ್ಕೆ ಹೋಗಿ ಓರ್ವ ವ್ಯಕ್ತಿಯ ಬಳಿ ಆತನ ಆರೋಗ್ಯದ ಬಗ್ಗೆ ವಿಚಾರಿಸುತ್ತಿದ್ದೆವು. ಅಷ್ಟರಲ್ಲೇ ಆಗಮಿಸಿದ ಕೆಲವು ಜನ ಪ್ರತಿಭಟನೆ ನಡೆಸಲು ಶುರು ಮಾಡಿದರು. ಅವರೊಂದಿಗೆ ಮತ್ತೊಂದಷ್ಟು ಜನ ಸೇರಿಕೊಂಡು ನಮ್ಮೆಡೆಗೆ ಕಲ್ಲು ತೂರಲು ಪ್ರಾರಂಭಿಸಿದರು ಎಂದು ಹೇಳಿದ್ದಾರೆ. ಅಲ್ಲೇ ಸ್ವಲ್ಪ ದೂರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರು ನಮ್ಮನ್ನು ಕಾಪಾಡಿದರು ಎಂದು ತಿಳಿಸಿದ್ದಾರೆ.

      ಕೊರೊನಾ ವೈರಸ್​ನಿಂದ ಇಡೀ ಭಾರತವೇ ಸಂಕಷ್ಟಕ್ಕೊಳಗಾಗಿದೆ. ಇದರ ಮಧ್ಯೆ ಪ್ರತಿ ಗ್ರಾಮಕ್ಕೂ ತೆರಳುತ್ತಿರುವ ವೈದ್ಯಕೀಯ ಸಿಬ್ಬಂದಿ ಎಲ್ಲರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ. ಮಧ್ಯಪ್ರದೇಶದ ಇಂದೋರ್​​ನ ಟಾಟಪಟ್ಟಿ ಬಕಲ್​ ಗ್ರಾಮದಲ್ಲಿ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap