ಐವರು ಡಿಸಿಎಂಗಳ ನೇಮಕಕ್ಕೆ ಮುಂದಾದ ಸರ್ಕಾರ!!!

ಅಮರಾವತಿ:

     ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್‌ಮೋಹನ್ ರೆಡ್ಡಿ ತನ್ನ ಸರಕಾರದಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ.

      ಶುಕ್ರವಾರ ಇಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ರೆಡ್ಡಿ ಈ ಘೋಷಣೆ ಮಾಡಿದ್ದು, ಎಸ್‌ಸಿ, ಎಸ್‌ಟಿ, ಓಬಿಸಿ, ಅಲ್ಪ ಸಂಖ್ಯಾತ ಹಾಗೂ ಕಾಪು ಸಮುದಾಯಗಳಿಗೆ ಸೇರಿದವರನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡುವ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

      ಉಮ್ಮಾರೆಡ್ಡಿ ವೆಂಕಟೇಶ್ವರಲು ಅಥವಾ ಅಲ್ಲಾ ನಾನಿ(ಕಾಪು), ರಂಜನಾ ದೋರಾ(ಎಸ್ಟಿ), ಕೆ ಪಾರ್ಥಸಾರಥಿ(ಯಾದವ ಹಿಂದುಳಿದ ವರ್ಗ), ಎಂ ಸುಚರಿತಾ( ಎಸ್ ಸಿ) ಹಾಗೂ ಅಹ್ಜಾದ್ ಬಾಷಾ(ಅಲ್ಪಸಂಖ್ಯಾತ), ಸಚಿವ ಸಂಪುಟ ಸದಸ್ಯರ ಅವಧಿ ಎರಡೂವರೆ ವರ್ಷ ಆನಂತರ ಶೇ 90ರಷ್ಟು ಸಚಿವರಿಗೆ ಗೇಟ್ ಪಾಸ್ ನೀಡಿ ಹೊಸಬರಿಗೆ ಅವಕಾಶ ನೀಡುವ ಯೋಜನೆ ಜಗನ್ ಹಾಕಿಕೊಂಡಿದ್ದಾರೆ.

      ಶನಿವಾರ(ಜೂನ್ 8)ದಂದು ವೈಎಸ್ಸಾರ್ ಕಾಂಗ್ರೆಸ್ ಪಕ್ಷದ ಸಚಿವ ಸಂಪುಟ ವಿಸ್ತರಣೆಗೊಳ್ಳಲಿದೆ. 25 ಮಂದಿ ಶಾಸಕರನ್ನು ಸಚಿವ ಸಂಪುಟಕ್ಕೆ ಜಗನ್ ಸೇರಿಸಿಕೊಳ್ಳುತ್ತಿದ್ದಾರೆ. ಈ ಪೈಕಿ ಐವರು ಉಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

      ಈ ಹಿಂದೆ ಚಂದ್ರಬಾಬು ನಾಯ್ಡು ನೇತೃತ್ವದ ಸರಕಾರದಲ್ಲಿ ಬಿಸಿ ಹಾಗೂ ಕಾಪು ಸಮುದಾಯಕ್ಕೆ ಸೇರಿದ ಇಬ್ಬರು ಉಪ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

     ದೇಶದಲ್ಲಿ ಇದೇ ಮೊದಲ ಬಾರಿ ಸಂಪುಟವೊಂದರಲ್ಲಿ ಐವರು ಉಪ ಮುಖ್ಯಮಂತ್ರಿಗಳನ್ನು ನೇಮಿಸಲು ನಿರ್ಧರಿಸಲಾಗಿದೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link
Powered by Social Snap