ರೈಲಿನಲ್ಲಿ 50 ಮಾನವ ಅಸ್ಥಿಪಂಜರಗಳ ಸಾಗಾಟ!

ಪಾಟ್ನಾ:

      ರೈಲಿನಲ್ಲಿ ಸಾಗಿಸಲಾಗುತ್ತಿದ್ದ 50 ಮಾನವ ಅಸ್ಥಿಪಂಜರಗಳನ್ನು ಬಿಹಾರದ ಸರನ್ ಜಿಲ್ಲೆಯ ಛಾಪ್ರ ರೈಲ್ವೆ ನಿಲ್ದಾಣದಲ್ಲಿ ಸರಕಾರಿ ರೈಲ್ವೆ ಪೊಲೀಸ್ ಸಿಬ್ಬಂದಿ ಮಂಗಳವಾರ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. 

      ಬಂಧಿತ ವ್ಯಕ್ತಿಯನ್ನು ಸಂಜಯ್ ಪ್ರಸಾದ್ ಎಂದು ಗುರುತಿಸಲಾಗಿದ್ದು ಆತ ಬಲಿಯಾ-ಸಿಯಲ್ದಾಹ್ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಚರಿಸುತ್ತಿದ್ದ.

     ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದ್ದು ಆತನ ಮೊಬೈಲ್ ಫೋನಿನಲ್ಲಿರುವ ಫೋನ್ ಸಂಖ್ಯೆಗಳನ್ನು ಪರಾಮರ್ಶಿಸಲಾಗುತ್ತಿದೆ. ಆರೋಪಿಯಿಂದ ನೇಪಾಳ ಮತ್ತು ಭೂತಾನ್ ದೇಶಗಳ ಕರೆನ್ಸಿ ನೋಟುಗಳು, ಎಟಿಎಂ ಕಾರ್ಡುಗಳು, ಎರಡು ಗುರುತಿನ ಚೀತಿ, ಹಾಗೂ ನೇಪಾಳದ ಮೊಬೈಲ್ ಸಂಖ್ಯೆಗಳಿರುವ ಸಿಮ್ ಕಾರ್ಡುಗಳನ್ನು ವಶಪಡಿಸಿಕೊಳ್ಳಲಾಗಿದೆ.

     ಉತ್ತರ ಪ್ರದೇಶದ ಬಲಿಯಾ ಎಂಬಲ್ಲಿಂದ ಆತ ಈ ಅಸ್ಥಿಪಂಜರಗಳನ್ನು ಸಾಗಿಸುತ್ತಿದ್ದ ಎನ್ನಲಾಗಿದ್ದು, ಭೂತಾನ್ ಮೂಲಕ ಚೀನಾಗೆ ಸಾಗಿಸುವ ಉದ್ದೇಶ ಆರೋಪಿಗಿತ್ತು ಎನ್ನಲಾಗಿದೆ.

      ವೈದ್ಯಕೀಯ ವಿದ್ಯಾರ್ಥಿಗಳಿಂದ ಅಸ್ಥಿಪಂಜರಗಳಿಗೆ ಬಹಳಷ್ಟು ಬೇಡಿಕೆಯಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳುತ್ತಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap