21 ನಿಮಿಷದಲ್ಲಿ ಪಾಕ್ ನ 300 ಉಗ್ರರು ಫಿನಿಷ್!!

ದೆಹಲಿ:

     ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಎಲ್‍ಓಸಿ (ಪಾಕ್ ಆಕ್ರಮಿತ ಕಾಶ್ಮೀರ) ಗಡಿ ಭಾಗದಲ್ಲಿ ಭಾರತೀಯ ವಾಯುಸೇನೆ ಏರ್ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದು, 21 ನಿಮಿಷದಲ್ಲಿ ಮೂರು ಉಗ್ರರ ತರಬೇತಿ ಶಿಬಿರಗಳ ಮೇಲೆ ದಾಳಿ ನಡೆಸಿದೆ.

     ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಜೈಶ್ ಎ ಮಹಮ್ಮದ್ ಉಗ್ರ ಆತ್ಮಾಹುತಿ ದಾಳಿ ನಡೆಸಿದ್ದ ಪರಿಣಾಮ 40 ಯೋಧರು ಹುತಾತ್ಮರಾಗಿದ್ದ ಘಟನೆಗೆ ಸಂಬಂಧಿಸಿದಂತೆ ಭಾರತ ಮಂಗಳವಾರ ಪಾಕ್ ಉಗ್ರರ ವಿರುದ್ಧ ಪ್ರತೀಕಾರ ತೆಗೆದುಕೊಂಡಿದೆ.

ಪಾಕಿಸ್ತಾನದ ಒಳಗೆ ನುಗ್ಗಿ ಉಗ್ರರ ಉಡಿಸ್ ಮಾಡಿದ ಭಾರತೀಯ ಸೇನೆ….!!!

      ಇಂದು ಮುಂಜಾನೆ ಪಾಕಿಸ್ತಾನದ ಎಲ್ ಒಸಿಯೊಳಗೆ ಭಾರತೀಯ ಸೇನೆ ನುಗ್ಗಿ ಬರೋಬ್ಬರಿ ಒಂದು ಸಾವಿರ ಕೆಜಿ ತೂಕದ ಬಾಂಬ್ ದಾಳಿ ನಡೆಸಿದೆ. ಈ ಭಾರೀ ದಾಳಿಯಲ್ಲಿ ಎಲ್ ಒಸಿ ಬಳಿ ಅಡಗಿದ್ದ 300ಕ್ಕೂ ಹೆಚ್ಚು ಉಗ್ರರು ಮೃತಪಟ್ಟು ಅವರ ಅಡಗುದಾಣಗಳು ಸಂಪೂರ್ಣ ನಾಶವಾಗಿವೆ ಎಂದು ಪ್ರಾಥಮಿಕ ವರದಿಯಾಗಿದೆ. ಈ ಅಂಕಿ ಅಂಶಗಳ ಅಧಿಕೃತ ಮಾಹಿತಿ ಇನ್ನಷ್ಟೇ ಹೊರಬೀಳಬೇಕಿದೆ.

      ಪಾಕಿಸ್ತಾನದ 24 ಕಿಲೋ ಮೀಟರ್ ಒಳಗೆ ನುಗ್ಗಿ ಈ ಏರ್ ಸರ್ಜಿಕಲ್ ಸ್ಟ್ರೈಕ್ ನಡೆಸಲಾಗಿದೆ. ಪುಲ್ವಾಮಾದಲ್ಲಿ 40 ಸಿಆರ್ ಪಿಎಫ್ ಯೋಧರನ್ನು ಉಗ್ರರು ಹತ್ಯೆಗೈದ ಎರಡು ವಾರಗಳ ಬಳಿಕ ಭಾರತ ದಾಳಿ ನಡೆಸುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.

      ಈ ಕುರಿತು ಪ್ರತಿಕ್ರಿಯಿಸಿರುವ ಪಾಕಿಸ್ತಾನ, ಭಾರತೀಯ ಯುದ್ಧವಿಮಾನಗಳು ಗಡಿನಿಯಂತ್ರಣ ರೇಖೆಯನ್ನು ಉಲ್ಲಂಘಿಸಿವೆ ಮತ್ತು ಇದಕ್ಕೆ ಪಾಕ್ ವಾಯುಪಡೆ ಸೂಕ್ತ ಪ್ರತ್ಯುತ್ತರ ನೀಡಿ ಅವುಗಳನ್ನು ಹಿಮ್ಮೆಟ್ಟಿಸಿವೆ ಎಂದು ಪಾಕಿಸ್ಥಾನ ಸೇನೆಯ ವಕ್ತಾರ ಮೇಜರ್ ಜನರಲ್ ಆಸಿಫ್ ಗಫೂರ್ ಟ್ವಿಟ್ಟರ್ ಮೂಲಕ ಭಾರತದ ವಿರುದ್ಧ ಆರೋಪ ಮಾಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap