ದೆಹಲಿ:
ಭಾರತೀಯ ವಾಯು ಪಡೆಗೆ ಮೊದಲ ಅಪಾಚೆ ಗಾರ್ಡಿಯನ್ ದಾಳಿ ಹೆಲಿಕಾಪ್ಟರ್ (ಎಎಚ್-64(1) ಸೇರ್ಪಡೆಗೊಂಡಿದೆ.
ಭಾರತೀಯ ವಾಯಪಡೆಯ ಪ್ರತಿನಿಧಿಯಾಗಿ ಏರ್ ಮಾರ್ಷಲ್ ಎ.ಎಸ್ ಬಟೋಲಾ ಅವರು ಅಮೆರಿಕದ ಅರಿಝೋನಾದಲ್ಲಿರುವ ಮೆಸಾ ಬೋಯಿಂಗ್ ಉತ್ಪಾದನಾ ಕೇಂದ್ರದಲ್ಲಿ ಮೊದಲ ಅಪಾಚೆ ಹೆಲಿಕಾಪ್ಟರ್ ಅನ್ನು ಸ್ವೀಕರಿಸಿದರು.
ಐಎಎಫ್ ಹಂಚಿಕೊಂಡಿರುವ ಮಾಹಿತಿಯ ಪ್ರಕಾರ ಎಎಚ್-64ಇ(ಐ) ಅಪಾಚೆ ದಾಳಿ ಹೆಲಿಕಾಪ್ಟರ್ ಪೂರೈಕೆಯು ಭಾರತೀಯ ವಾಯು ಪಡೆಯ ಆಧುನೀಕರಣದಲ್ಲಿ ಇರಿಸಲಾಗಿರುವ ಮಹತ್ತರ ಹೆಜ್ಜೆ ಯಾಗಿದೆ. ಇದನ್ನು ಐಎಎಫ್ ನ ಆವಶ್ಯಕ್ಯತೆಗೆ ತಕ್ಕಂತೆ ಮಾರ್ಪಡಿಸಲಾಗಿದೆ.
‘ಅಪಾಚೆ ಹೆಲಿಕಾಪ್ಟರ್‌ಗಳು ನೆಲದಿಂದ ಅಪಾಯದ ಒದಗಬಹುದಾದ ಶತ್ರುವಿನ ಆಗಸದಲ್ಲೂ ನಿಖರ ದಾಳಿ ನಡೆಸುವ ಸಾಮರ್ಥ್ಯ ಹೊಂದಿವೆ. ಯುದ್ಧರಂಗದ ಚಿತ್ರಣವನ್ನು ಪ್ರಸಾರ ಮಾಡುವ ಮತ್ತು ಸ್ವೀಕರಿಸುವ ಸಾಮರ್ಥ್ಯವನ್ನೂ ಅಪಾಚೆಗಳು ಹೊಂದಿವೆ’ ಎಂದು ಭಾರತೀಯ ವಾಯುಪಡೆ ಹೇಳಿದೆ.
ಸ್ಟಿಂಗರ್ ಏರ್ ಟು ಏರ್ ಕ್ಷಿಪಣಿಗಳು, ಹೆಲ್‌ಫೈರ್ ಲಾಂಗ್‌ಬೋ ಏರ್ ಟು ಗ್ರೌಂಡ್ ಕ್ಷಿಪಣಿಗಳು, ಗನ್‌ಗಳು ಮತ್ತು ರಾಕೆಟ್‌ಗಳನ್ನು ಅಪಾಚೆ ಹೆಲಿಕಾಪ್ಟರ್‌ಗಳು ಹೊಂದಿರುತ್ತವೆ.
ಈ ಹೆಲಿಕಾಪ್ಟರ್‌ಗಳ ಮೊದಲ ಕಂತು ಜುಲೈನಲ್ಲಿ ಭಾರತಕ್ಕೆ ತಲುಪಲಿದೆ. ಇವುಗಳ ಬಳಕೆಗೆ ಆಯ್ದ ವೈಮಾನಿಕ ಸಿಬ್ಬಂದಿ ಹಾಗೂ ವಾಯುನೆಲೆ ಸಿಬ್ಬಂದಿಗೆ ಅಮೆರಿಕದ ಅಲಬಾಮಾದ ಫೋರ್ಟ್ ರುಕರ್ ಸೇನಾ ನೆಲೆಯಲ್ಲಿ ತರಬೇತಿ ನೀಡಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
