13 ಮಂದಿಯಿದ್ದ ಭಾರತೀಯ ವಾಯುಪಡೆಯ ವಿಮಾನ ನಾಪತ್ತೆ!!

ದೆಹಲಿ :

      13 ಪ್ರಯಾಣಿಕರಿದ್ದ ಭಾರತೀಯ ವಾಯುಪಡೆಯ ಎಎನ್‌-32 ವಿಮಾನ ಸೋಮವಾರ ಬೆಳಗ್ಗೆ ನಾಪತ್ತೆಯಾಗಿದೆ.  

      8 ಸಿಬ್ಬಂದಿ ಹಾಗೂ 5 ಮಂದಿ ಪ್ರಯಾಣಿಕರಿದ್ದ Antonov AN-32 ಮಿಲಿಟರಿ ಸಾರಿಗೆ ಏರ್ ಕ್ರಾಫ್ ಇಂದು (ಜೂನ್ 03) ಮಧ್ಯಾಹ್ನ 1 ಗಂಟೆ ಸಾರಿಗೆ ಅಸ್ಸಾಂನ ಜೋಹ್ರಾತ್‌ ವಾಯುನೆಲೆಯಿಂದ ಟೇಕಾಫ್‌ ಆಗಿತ್ತು. ಅರ್ಧ ಗಂಟೆ ಬಳಿಕ ಸಂಪರ್ಕ ಕಳೆದುಕೊಂಡಿತು. 

      ಕೂಡಲೇ ವಾಯುಪಡೆ ಸುಖೋಯ್-30 ಯುದ್ಧ ವಿಮಾನ ಮತ್ತು ಸಿ-130 ವಿಶೇಷ ಕಾರ್ಯಾಚರಣೆ ವಿಮಾನಗಳ ಮೂಲಕ ಶೋಧ ಕಾರ್ಯಾಚರಣೆ ಆರಂಭಿಸಿತು.  ಕಳೆದ ಎರಡು ಗಂಟೆಗಳಿಂದ ಸಂಪರ್ಕಕ್ಕೆ ಪ್ರಯತ್ನ ನಡೆದಿದೆ.  

      ವಾಯುಪಡೆಯ ಅತ್ಯಂತ ಪ್ರಮುಖ ವಿಮಾನವೆಂದೇ ಹೆಸರಾದ ಎಎನ್‌-32 ಗಂಟೆಗೆ ಗರಿಷ್ಠ 530 ಕಿ.ಮೀ ವೇಗದಲ್ಲಿ ಹಾರುವ ಸಾಮರ್ಥ್ಯ ಹೊಂದಿದ್ದು, 39 ಪ್ಯಾರಾಟ್ರೂಪ್‌ಗಳು ಮತ್ತು ಐವರು ಸಿಬ್ಬಂದಿಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. 

       ನಾಪತ್ತೆಯಾಗಿರುವ ವಿಮಾನವನ್ನು ಪತ್ತೆ ಹಚ್ಚಲು ಭಾರತೀಯ ವಾಯು ಪಡೆ ತನ್ನೆಲ್ಲ ಸಂಪನ್ಮೂಲಗಳನ್ನು ಕ್ರಿಯಾಶೀಲಗೊಳಿಸಿದೆ ಎಂದು ಮೂಲಗಳು ತಿಳಿಸಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ