ಅಂಡರ್-19 ವಿಶ್ವಕಪ್‍ಗೆ ಟೀಮ್ ಇಂಡಿಯಾ ಆಯ್ಕೆ!!

ದೆಹಲಿ: 

      2020ರ ಅಂಡರ್ 19 ವಿಶ್ವಕಪ್ ಗೆ ಒಟ್ಟು 16 ತಂಡಗಳು ಭಾಗವಹಿಸಲಿದ್ದು, ತಲಾ ನಾಲ್ಕು ತಂಡಗಳ ಗುಂಪನ್ನು ಆಯ್ಕೆ ಮಾಡಲಾಗಿದೆ. 

      2020ರ ಜನವರಿ 17 ರಿಂದ ಅಂಡರ್ 19 ವಿಶ್ವಕಪ್ ಪ್ರಾರಂಭವಾಗಲಿದ್ದು, ಅಂಡರ್- 19 ವಿಶ್ವಕಪ್ ಗೆದ್ದು ವಿಶ್ವಕಪ್ ಮುಕುಟವನ್ನು ತನ್ನಲ್ಲೇ ಉಳಿಸಿಕೊಳ್ಳುವ ಭರವಸೆ ಮೂಡಿಸಿದೆ.

      ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ತಂಡವನ್ನು ಪ್ರಕಟಿಸಿದ್ದು, ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಕಿರಿಯರ ವಿಶ್ವಕಪ್‌ನಲ್ಲಿ 15 ಮಂದಿ ಸದಸ್ಯ ಭಾರತ ತಂಡವನ್ನು ಉತ್ತರ ಪ್ರದೇಶದ ಬ್ಯಾಟ್ಸ್‌ ಮನ್ ಪ್ರಿಯಂ ಗಾರ್ಗ್ ಮುನ್ನಡೆಸಲಿದ್ದಾರೆ. ಐಸಿಸಿ ಕಿರಿಯರ ವಿಶ್ವಕಪ್ ಜನವರಿ 17ರಿಂದ ಫೆಬ್ರವರಿ 9ರ ವರೆಗೆ ನಡೆಯಲಿದೆ.

     ಆಯ್ಕೆ ಮಾಡಿರುವ 4 ಗುಂಪುಗಳ ಪೈಕಿ ಎ ಗುಂಪಿನಲ್ಲಿ ಭಾರತ, ಜಪಾನ್, ಶ್ರೀಲಂಕಾ, ನ್ಯೂಜಿಲೆಂಡ್ ತಂಡಗಳು ಕಾಣಿಸಿಕೊಂಡಿವೆ. 2020ರ ಅಂಡರ್ 19 ವಿಶ್ವಕಪ್ ಸರಣಿಗೆ ಬಿಸಿಸಿಐ ಟೀಮ್ ಇಂಡಿಯಾ ಹಿರಿಯ ಆಟಗಾರರ ಪಟ್ಟಿಯನ್ನು ನಿನ್ನೆ ಪ್ರಕಟಿಸಿದೆ.

      2020ರ ಅಂಡರ್ 19 ವಿಶ್ವಕಪ್ ಸರಣಿಗೆ ಬಿಸಿಸಿಐ 15 ಜನರ ತಂಡವನ್ನು ಪ್ರಕಟಿಸಲಾಗಿದ್ದು, ನಾಯಕನಾಗಿ ಪ್ರಿಯಂ ಗಾರ್ಗ್, ಉಪ ನಾಯಕ ಹಾಗೂ ವಿಕೆಟ್ ಕೀಪರ್ ಆಗಿ ಧ್ರುವ ಚಂದ್ ಜೂರೆಲ್, ಯಶಸ್ವಿ ಜೈಸ್ವಲ್, ತಿಲಕ್ ವರ್ಮಾ, ದಿವ್ಯಾಂಶ್ ಸಕ್ಸೇನ, ಶುಭಂ ಹೆಗಡೆ, ರವಿ ಬಿಶ್ನೋಯ್, ಆಕಾಶ ಸಿಂಗ್, ಕಾರ್ತಿಕ್ ತ್ಯಾಗಿ, ಅಥರ್ವ ಅಂಕೋಲೆಕರ್, ಕುಮಾರ್ ಕುಶಾಗ್ರ, ಸುಶಾಂತ್ ಮಿಶ್ರಾ, ವಿದ್ಯಾಧರ್ ಪಾಟೀಲ್ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ