ಸ್ವಯಂಘೋಷಿತ ದೇವಮಾನವನಿಗೆ ಜೀವಾವಧಿ ಶಿಕ್ಷೆ

ಹರ್ಯಾಣ:

     ಸ್ವಯಂಘೋಷಿತ ದೇವಮಾನವ ರಾಮಪಾಲ್ ಅವರಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. ಎರಡು ಕೊಲೆ ಪ್ರಕರಣಗಳಲ್ಲಿ ಅಪರಾಧಿ ಎಂದು ಹಿಸಾರ್ ಸೆಂಟ್ರಲ್ ಜೈಲಿನಲ್ಲಿ ನ್ಯಾಯಾಧೀಶರು ಮಂಗಳವಾರದಂದು ಶಿಕ್ಷೆಪ್ರಮಾಣ ಘೋಷಿಸಿದ್ದಾರೆ. 

      ತೀರ್ಪು ಪ್ರಕಟಿಸುವ ವೇಳೆ ರಾಮ್ ಪಾಲ್ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ವಿಚಾರಣೆಗೆ ಹಾಜರಿದ್ದರು. ಈ ಎರಡು ಪ್ರಕರಣಗಳಲ್ಲಿ ದೋಷಿಯಾಗಿರುವ ರಾಮ್ ಪಾಲ್ ಅವರನ್ನು ದೋಷಿ ಎಂದು ಅಕ್ಟೋಬರ್ 11ರಂದು ಘೋಷಿಸಲಾಗಿತ್ತು. ಅಕ್ಟೋಬರ್ 16ರಂದು ಶಿಕ್ಷೆ ಪ್ರಮಾಣ ಪ್ರಕಟವಾಗಿದೆ. ಎರಡು ಪ್ರಕರಣಗಳಲ್ಲೂ ಜೀವಾವಧಿ ಶಿಕ್ಷೆ ಪ್ರಕಟಿಸಲಾಗಿದೆ. 

      ಈ ಹಿಂದೆ ಆಗಸ್ಟ್ 29, 2017ರಂದು ಹಿಸಾರ್ ಕೋರ್ಟಿನಲ್ಲಿ ಎರಡು ಪ್ರಕರಣಗಳಲ್ಲಿ ಸರಿಯಾದ ಸಾಕ್ಷಿಗಳಿಲ್ಲದೆ, ಖುಲಾಸೆಗೊಂಡಿದ್ದರು. ಆದರೆ, ಮರು ತನಿಖೆಯಾಗುವ ತನಕ ಜೈಲಿನಲ್ಲೇ ಇರಬೇಕಾಯಿತು. ಕೋರ್ಟಿಗೆ ಕರೆದೊಯ್ಯಲು ಕಾನೂನು ಸುವ್ಯವಸ್ಥೆಯ ಹದಗೆಡುವ ಶಂಕೆಯಿಂದ ಸೆಂಟ್ರಲ್ ಜೈಲಿನ ಆವರಣ ಕೋರ್ಟಿನಲ್ಲೇ ವಿಚಾರಣೆ ನಡೆಸಿ, ತೀರ್ಪು ನೀಡಲಾಗಿದೆ. 

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 
 

Recent Articles

spot_img

Related Stories

Share via
Copy link
Powered by Social Snap