ದೆಹಲಿ :
ದೇಶದಲ್ಲಿ ಗೋ ರಕ್ಷಣೆಗೆ ಗೋಹತ್ಯೆ ನಿಷೇಧ ಕಾಯ್ದೆ ಕೂಗು ಕೇಳಿ ಬರುತ್ತಿರುವ ಹೊತ್ತಲ್ಲೇ ಶಾಕಿಂಗ್ ನ್ಯೂಸ್ ವೊಂದು ಹೊರಬಿದ್ದಿದ್ದು, ಗೋಮಾಂಸ ರಪ್ತಿನಲ್ಲಿ ಭಾರತ ವಿಶ್ವದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ.
ಅಮೆರಿಕದ ಕೃಷಿ ಇಲಾಖೆ ಗೋಮಾಂಸ ರಪ್ತಿನ ಕುರಿತು ವರದಿಯನ್ನು ಬಿಡಗುಡೆ ಮಾಡಿದ್ದು, 2017-19 ರ ಅವಧಿಯಲ್ಲಿ ಗೋಮಾಂಸ ರಪ್ತಿನಲ್ಲಿ ಬ್ರೆಜಿಲ್ ಮೊದಲ ಸ್ಥಾನ ಪಡೆದುಕೊಂಡರೆ, ಭಾರತಕ್ಕೆ 2 ನೇ ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ ಆಸ್ಟ್ರೇಲಿಯಾ ಇದೆ.
ದೇಶದ ಕೆಲ ರಾಜ್ಯಗಳಲ್ಲಿ ಮಾತ್ರ ಗೋ ಹತ್ಯೆ ನಿಷೇಧ ಮಾಡಲಾಗಿದೆ. ವಿಶ್ವದ ನಾನಾ ರಾಷ್ಟ್ರಗಳು ಗೋ ಮಾಂಸವನ್ನು ರಫ್ತು ಮಾಡುತ್ತವೆ. ಇದರಲ್ಲಿ ಭಾರತ ಕೂಡ ಹಿಂದೆ ಬಿದ್ದಿಲ್ಲ.
ಭಾರತವು 2017 ರಲ್ಲಿ 18 ಲಕ್ಷ ಟನ್, 2018 ರಲ್ಲಿ 19 ಮೆಟ್ರಿಕ್ ಲಕ್ಷ ಟನ್ ಗೋಮಾಂಸವನ್ನು ವಿದೇಶಗಳಿಗೆ ರಪ್ತು ಮಾಡಿದೆ. ಬ್ರೆಜಿಲ್ 2017 ರಲ್ಲಿ 19 ಮೆಟ್ರಿಕ್ ಟನ್ ಗೋಮಾಂಸ ರಪ್ತು ಮಾಡಿದ್ದರೆ, 2019 ರಲ್ಲಿ 22 ಲಕ್ಷ ಮೆಟ್ರಿಕ್ ಟನ್ ಗೆ ಏರಿಕೆಯಾಗಿದೆ ಎಂದು ಅಮೆರಿಕ ಕೃಷಿ ಇಲಾಖೆ ವರದಿ ತಿಳಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
