ದೇಶದಲ್ಲಿ 31 ಲಕ್ಷ ದಾಟಿದ ಕೊರೊನಾ ಸೋಂಕಿತರು!

ನವದೆಹಲಿ:

     ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಕೊರೋನಾ ಪೀಡಿತರ ಸಂಖ್ಯೆ 31 ಲಕ್ಷ ಗಡಿ ದಾಟಿದೆ.

     ಕಳೆದ 24 ಗಂಟೆಯಲ್ಲಿ 61,408 ಹೊಸ ಪ್ರಕರಣಗಳು ಪತ್ತೆಯಾಗಿವೆ. ಒಂದೇ ದಿನದಲ್ಲಿ 836 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 57,542ಕ್ಕೆ ಏರಿಕೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೋನಾ ಪೀಡಿತರ ಸಂಖ್ಯೆ 31,06,349ಕ್ಕೆ ಏರಿಕೆಯಾಗಿದೆ.

    ದೇಶದಲ್ಲಿ ಒಟ್ಟಾರೆ 23,38,036 ಮಂದಿ ಗುಣಮುಖ ಹೊಂದಿದ್ದು, ಶೇ. 75ಕ್ಕೆ ತಲುಪಿದೆ.  ಕೊರೊನಾ ಸೋಂಕಿನಿಂದ ಮೃತ ಪಡುವವರ ಸಂಖ್ಯೆ ಶೇ.1.86ರಷ್ಟು ಕಡಿಮೆಯಾಗಿದೆ. ಗುಣಗುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದ್ದು, ಸೋಂಕಿತರ ಸಂಖ್ಯೆ 23.24ರಷ್ಟಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap