ಪ್ರಧಾನಿ ಮೋದಿಯನ್ನು ಮತ್ತೆ ‘ಚೋರ್’ ಎಂದ ರಮ್ಯಾ..!

ನವದೆಹಲಿ:

      ಕೆಲವು ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ಚೋರ್’ ಎಂದು ಕರೆದು ಟ್ವೀಟ್ ಮಾಡಿದ್ದ, ಮಾಜಿ ಸಂಸದೆ ಮತ್ತು ಕಾಂಗ್ರೆಸ್‌ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮತ್ತೆ ‘ಚೋರ್‌’ ಎಂದು ಕರೆದಿದ್ದಾರೆ. 

      ರಫೆಲ್‌ ಒಪ್ಪಂದ ವಿವಾದಕ್ಕೆ ಸಂಬಂಧಿಸಿ ಪ್ರಧಾನಿ ಮೋದಿ ಅವರನ್ನು ಟೀಕಿಸಿ ಟ್ವೀಟ್‌ ಮಾಡಿದ್ದ ರಮ್ಯಾ, ಮೋದಿಯವರ ಮೇಣದ ಪ್ರತಿಮೆ ಮೇಲೆ ಚೋರ್‌ ಎಂದು ಬರೆಯುತ್ತಿರುವ ಎಡಿಟ್‌ ಮಾಡಿದ್ದ ಫೋಟೋ ಹಾಕಿ #ChorPMChupHai ಎಂದು ಹ್ಯಾಷ್‌ ಟ್ಯಾಗ್‌ ಹಾಕಿದ್ದರು. 

     ಈ ಪೋಸ್ಟ್‌ ವಿರುದ್ಧ ಸಾಮಾಜಿಕ ಕಾರ್ಯಕರ್ತ ಸೈಯದ್‌ ರಿಜ್ವಾನ್‌ ಎಂಬುವವರು ಉತ್ತರ ಪ್ರದೇಶದ ಗೋಮತಿನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ರಿಜ್ವಾನ್‌ ದೂರಿನನ್ವಯ ಎಫ್‌ಐಆರ್‌ ದಾಖಲಾಗಿತ್ತು.      

      ನನ್ನ ಟ್ವೀಟ್‌ಗೆ ಬೆಂಬಲಿಸಿದವರಿಗೆ ಮತ್ತು ವಿರೋಧಿಸಿದವರಿಗೆ ಧನ್ಯವಾದಗಳು. ಸರಿ, ಮುಂದೇನು ಹೇಳಲಿ? ಮುಂದಿನ ಸಲ ಮತ್ತಷ್ಟು ಕ್ಲಾಸಿಯಾಗಿ ಟ್ವೀಟ್‌ ಮಾಡುತ್ತೇನೆ. ಭಾರತವು ರಾಷ್ಟ್ರದ್ರೋಹದ ಕಾನೂನನ್ನು ದೂರವಿಡಬೇಕು. ಏಕೆಂದರೆ ರಾಷ್ಟ್ರದ್ರೋಹದ ಕಾನೂನು ಪುರಾತನವಾದದ್ದು ಮತ್ತು ದುರ್ಬಳಕೆಯಾಗುತ್ತಿದೆ ಎಂದಿರುವ ರಮ್ಯಾ ಎಫ್‌ಐಆರ್‌ ದಾಖಲಿಸಿದವರಿಗೆ ಮತ್ತೆ ‘ಪಿಎಂ ಚೋರ್‌ ಹೇ’ ಎಂದು ನೆನಪಿಸಿದ್ದಾರೆ. 

     

Recent Articles

spot_img

Related Stories

Share via
Copy link