ಅಸ್ಸಾಂ ಪ್ರವಾಹ : ಭಾರತಕ್ಕೆ ಸ್ಯಾಟಲೈಟ್ ಮಾಹಿತಿ ನೀಡಿದ ಚೀನಾ!

ದೆಹಲಿ: 

      ನೈಸರ್ಗಿಕ ಅಥವಾ ಮಾನವ ನಿರ್ಮಿತ ವಿಪತ್ತುಗಳಿಂದ ಹಾನಿಗೊಳಗಾದ ದೇಶಗಳಿಗೆ ಬಾಹ್ಯಾಕಾಶ ಆಧಾರಿತ ಮಾಹಿತಿ ವಿನಿಮಯದಡಿ ಭಾರತ ತನ್ನ ಪ್ರವಾಹ ಪೀಡಿತ ಪ್ರದೇಶಗಳ ವಿವರವನ್ನು 8 ರಾಷ್ಟ್ರಗಳಿಂದ ಉಪಗ್ರಹ ದತ್ತಾಂಶ ಪಡೆದುಕೊಂಡಿದ್ದು, ಅದರಲ್ಲಿ ಮೊದಲ ಉಪ್ರಗ್ರಹ ಮಾಹಿತಿಯನ್ನು ಚೀನಾ ನೀಡಿದೆ ಎನ್ನಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

      ಉತ್ತರ ಮತ್ತು ಈಶಾನ್ಯ ಭಾರತದ ಪ್ರದೇಶಗಳಲ್ಲಿ ಯಥೇಚ್ಛ ಮಳೆಯಿಂದ ಬಿಹಾರ, ಅಸ್ಸಾಂನಲ್ಲಿ ಪ್ರವಾಹ ಉಂಟಾಗಿದೆ. ಜುಲೈ 18ರಂದು ಅಸ್ಸಾಂ ಪ್ರವಾಹದ ಮೊದಲ ದತ್ತಾಂಶವು ಚೀನಾದ ಗೌಫೆನ್-2 ಉಪಗ್ರಹದಿಂದ ಬಂದಿದೆ ಎಂದು ಹೇಳಿದೆ.

      ಅಂತಾರಾಷ್ಟ್ರೀಯ ವಿಪತ್ತು ಪರಿಹಾರಕ್ಕಾಗಿ ಇಸ್ರೋ ಕೋರಿಕೆಯ ಬಳಿಕ ಚೀನಾ ಪ್ರವಾಹ ಪರಿಹಾರ ಕಾರ್ಯಗಳಿಗೆ ಸಹಾಯ ಹಸ್ತ ಚಾಚಲು ಭಾರತದ ಪ್ರವಾಹ ಪೀಡಿತ ಪ್ರದೇಶಗಳ ಬಗ್ಗೆ ಉಪಗ್ರಹ ಡೇಟಾವನ್ನು ಒದಗಿಸಿದೆ. ಶೀಘ್ರವೇ ಪ್ರವಾಹ ಪೀಡಿತ ಪ್ರದೇಶಗಳು ಚೇತರಿಸಿಕೊಳ್ಳಿ ಎಂದು ಚೀನಾದ ನೂತನ ಭಾರತದ ರಾಯಭಾರಿ ಸನ್ ವೀಡಾಂಗ್ ಟ್ವೀಟ್​ ಮಾಡಿದ್ದಾರೆ.

      ಭೂ-ವೀಕ್ಷಣಾ ಉಪಗ್ರಹಗಳು ಭೂಮಿ ಮತ್ತು ಸಾಗರ ಮೇಲ್ಮೈಗಳ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯುತ್ತವೆ.ಚಾರ್ಟರ್ ನ ಮೂಲ ಸದಸ್ಯರಲ್ಲಿ ಒಂದಾಗಿರುವ ಇಸ್ರೋ, ಜುಲೈ 17 ರಂದು ಅಸ್ಸಾಂನ ಪ್ರವಾಹ ಪೀಡಿತ ಪ್ರದೇಶಗಳ ಮಾಹಿತಿಯನ್ನು ಕೋರಿದೆ.ಅದರಲ್ಲಿ ಪ್ರವಾಹದ ಕುರಿತ ಮೊದಲ ದತ್ತಾಂಶವು ಚೀನಾದ ಉಪಗ್ರಹದಿಂದ ಬಂದಿದೆ ಎನ್ನಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ