ವಿಶಾಖಪಟ್ನಂ :
ಜಲಾಂತರ್ಗಾಮಿ ನೌಕೆಗಳಿಂದ ಶತ್ರುಗಳ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಮತ್ತಷ್ಟು ಬಲಪಡಿಸುವತ್ತ ಹೆಜ್ಜೆ ಇಟ್ಟಿರುವ ಭಾರತ, ಅತ್ಯಂತ ಶಕ್ತಿಶಾಲಿ ಕ್ಷಿಪಣಿ ಶೌರ್ಯದ (ಕೆ4) ಪ್ರಯೋಗಾರ್ಥ ಉಡಾವಣೆಯನ್ನು ಭಾರತ ಯಶ್ವಸಿಯಾಗಿ ನಡೆಸಿದೆ.
ಡಿಆರ್‌ಡಿಒ ಅಭಿವೃದ್ಧಿ ಪಡಿಸಿರುವ ಈ ಕ್ಷಿಪಣಿಯನ್ನು ಆಂಧ್ರಪ್ರದೇಶದ ಕಡಲತಡಿಯಿಂದ ಭಾನುವಾರ ಬೆಳಿಗ್ಗೆ ಪರೀಕ್ಷಾರ್ಥ ಉಡಾವಣೆಯನ್ನು ಯಾವುದೇ ತೊಂದರೆಯಿಲ್ಲದೆ ನಡೆಸಲಾಯಿತು.
3,500 ಕಿ.ಲೋ ದೂರದ ವೈರಿ ನೆಲೆಯನ್ನು ನಿಖರವಾಗಿ ತಲುಪಬಲ್ಲ ಈ ಖಂಡಾಂತರ ಕ್ಷಿಪಣಿ ನೌಕಾಪಡೆಯ ಐಎನ್‍ಎಸ್ ಹರಿಯಂತ್ ಯುದ್ಧ ಹಡಗು ಮತ್ತು ಸಬ್‍ಮೆರೇನ್‍ನಲ್ಲಿ ಅಳವಡಿಸಬಹುದಾಗಿದೆ.
ಐಎನ್ಎಸ್ ಅರಿಹಂತ್‌ಗೆ ಖಂಡಾಂತರ ಕ್ಷಿಪಣಿ ಅಗ್ನಿ–3ರನ್ನು ಅಳವಡಿಸಿಕೊಳ್ಳುವ ಪ್ರಯತ್ನದಲ್ಲಿ ತೊಂದರೆಗಳನ್ನು ಉಂಟಾದ ನಂತರ ಕೆ4 ಕ್ಷಿಪಣಿಯನ್ನು ಅಭಿವೃದ್ಧಿಪಡಿಸಲಾಗಿದೆ. ಈ ಕ್ಷಿಪಣಿ 1.3 ಮೀಟರ್ ವ್ಯಾಸ, 12 ಮೀಟರ್ ಉದ್ದವಿದೆ. ಇದರ ತೂಕ ಸುಮಾರು 17 ಟನ್ ಆಗಿದೆ. 2,500 ಕೆಜಿ ತೂಕದ ಅಣ್ವಸ್ತ್ರ ಸಿಡಿತಲೆಯ ಇದು ಸಾಗಿಸಬಲ್ಲದು.
