ಅಕ್ಟೋಬರ್ 2ರಿಂದ ಪ್ಲಾಸ್ಟಿಕ್ ವಸ್ತುಗಳ ಬಳಕೆ ನಿಷೇಧ!!

ನವದೆಹಲಿ:

     ಪ್ಲಾಸ್ಟಿಕ್ ಬ್ಯಾಗ್, ಕಪ್ಸ್ ಹಾಗೂ ಸ್ಟ್ರಾ ಸೇರಿದಂತೆ ಎಲ್ಲಾ ವಿಧದ ಪ್ಲಾಸ್ಟಿಕ್ ವಸ್ತುಗಳಿಗೆ ಅಕ್ಟೋಬರ್ 2 ರಿಂದ ನಿಷೇಧ ಹೇರಿರುವುದಾಗಿ ತಿಳಿದುಬಂದಿದೆ.

      ಪ್ಲಾಸ್ಟಿಕ್​ ಬಳಕೆಯಿಂದ ಪರಿಸರ ಹಾಳಾಗುತ್ತಿದ್ದು, ಪ್ಲಾಸ್ಟಿಕ್​ ವಸ್ತುಗಳನ್ನ ನಿರ್ಮೂಲನೆ ಮಾಡಬೇಕೆಂದು ಸ್ವಾತಂತ್ರ್ಯ ದಿನಾಚರಣೆ ಸಂದರ್ಭದಲ್ಲಿ ಹೇಳಿದ್ದ ಪ್ರಧಾನಿ ಮೋದಿ ತಾವು ನುಡಿದಂತೆ ಪಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಮುಂದಾಗಿದ್ದಾರೆ.

      ಈ ಹಿನ್ನೆಲೆಯಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧಿ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅ.2ರಿಂದ ಏರ್ ಇಂಡಿಯಾದ ಎಲ್ಲಾ ವಿಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲಾಗಿದೆ. ಈ ಮೊದಲು ಏರ್ ಇಂಡಿಯಾದಲ್ಲಿ ವಿಶೇಷ ಊಟವನ್ನು ಪ್ಲಾಸ್ಟಿಕ್ ತಟ್ಟೆಯಲ್ಲಿ ನೀಡಲಾಗುತ್ತಿದ್ದು, ಇನ್ಮುಂದೆ ಪರಿಸರ ಸ್ನೇಹಿ ಸಾಧನ ಬಳಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ. ಪ್ಲಾಸ್ಟಿಕ್ ಟಂಬ್ಲರ್ಸ್ಸ್, ಟೀ ಕಪ್ ಗಳ ಬದಲಾಗಿ ಪೇಪರ್ ಕಪ್ ಬಳಕೆ ಮಾಡಲಾಗುವುದು ಎಂದು ತಿಳಿಸಿದೆ.

      ಪ್ಲಾಸ್ಟಿಕ್ ಬ್ಯಾಗ್​ಗಳು, ಕಪ್​ಗಳು, ಫಲಕಗಳು, ಸಣ್ಣ ಬಾಟಲ್​​​ಗಳು, ಸ್ಟ್ರಾ ಮತ್ತು ಕೆಲವು ಪ್ಲಾಸ್ಟಿಕ್ ವಸ್ತುಗಳನ್ನ ನಿಷೇಧಿಸಲು ಕೇಂದ್ರ ಮುಂದಾಗಿದೆ. ಈ ವಸ್ತುಗಳ ಉತ್ಪಾದನೆ, ಬಳಕೆ ಮತ್ತು ಆಮದನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

      ಮೊದಲ ಹಂತದಲ್ಲಿ ಏರ್ ಇಂಡಿಯಾ ಸಹಭಾಗಿತ್ವದ ವಿಮಾನದಲ್ಲಿ ಹಾಗೂ ಎರಡನೇ ಹಂತದಲ್ಲಿ ಏರ್ ಇಂಡಿಯಾ ವಿಮಾನಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧಿಸಲಾಗುವುದು ಎಂದು ವಿವರಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap