ಈ ಬಾರಿ ಭಾರತಕ್ಕೆ ವಿಶ್ವಕಪ್!!?

ಮುಂಬೈ:

      ಈ ಬಾರಿ ಭಾರತಕ್ಕೆ ವಿಶ್ವಕಪ್ ದೊರೆಯಲಿದೆ ಎಂದು ದೇಶದ ಬ್ಯಾಟಿಂಗ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಹೇಳಿದ್ದಾರೆ. 

      ಇಲ್ಲಿನ ಮಿಡಲ್​​ಸೆಕ್ಸ್​​ ಗ್ಲೋಬಲ್​​​ ಅಕಾಡೆಮಿ ಕ್ಲಬ್​​​ ಅನ್ನು ಉದ್ಘಾಟಿಸಿ ವಿಶ್ವಕಪ್​​​ ಬಗ್ಗೆ ಮಾತನಾಡಿದ ಸಚಿನ್​​​​ ಇದೇ 30 ರಿಂದ ಇಂಗ್ಲೆಂಡ್​ ನಲ್ಲಿ ಆರಂಭವಾಗಲಿರುವ ವಿಶ್ವಕಪ್​​​​​​​​ನಲ್ಲಿ ಭಾರತ ತಂಡ ಉತ್ತಮ ಆಟವಾಡಲಿದೆ.

Related image

      ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಪಿಚ್‌ಗಳು ಬ್ಯಾಟ್ಸ್‌ಮನ್‌ ಸ್ನೇಹಿಯಾಗಿರಲಿವೆ ಎಂದಿರುವ ಸಚಿನ್, ಏನೇ ಆದರೂ, ವಿಶ್ವಕಪ್‌ ಸಂದರ್ಭದಲ್ಲಿ ಇಂಗ್ಲೆಂಡ್‌ನಲ್ಲಿ ಉಷ್ಣ ಹವಾಗುಣ ಇರುವುದರಿಂದ ಬೌಲರ್‌ಗಳಿಗೆ ಚೆಂಡನ್ನು ಸ್ವಿಂಗ್‌ ಮಾಡಲು ಸಾಧ್ಯವಾಗಲಾರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 
      ಕಳೆದ ಬಾರಿ ಚಾಂಪಿಯನ್ಸ್​​ ಟ್ರೋಫಿಯಲ್ಲಿಯೂ ಟೀಂ ಇಂಡಿಯಾ ಉತ್ತಮ ಆಟವಾಡಿತ್ತು. ಆದರೆ, ವಿಶ್ವಕಪ್​​ ಬೇಸಿಗೆಯಲ್ಲಿ ಶುರುವಾಗುತ್ತಿರುವ ಕಾರಣ ಇಂಗ್ಲೆಂಡ್​ನಲ್ಲಿ ಹೆಚ್ಚು ಬಿಸಿಲು ಇರಲಿದೆ. ಅದನ್ನೆಲ್ಲಾ ಸಹಿಸಿಕೊಂಡು ಬೌಲಿಂಗ್​ ಮತ್ತು ಬ್ಯಾಟಿಂಗ್​​ ವಿಭಾಗಗಳಲ್ಲಿ ನಮ್ಮ ಆಟಗಾರರು ಹೋರಾಟ ನಡೆಸಲಿದ್ದಾರೆ ಎಂದು ತಿಳಿಸಿದ್ದಾರೆ.
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  
 

Recent Articles

spot_img

Related Stories

Share via
Copy link