ವಿಶ್ವಸಂಸ್ಥೆಯಲ್ಲಿ ಭಾರತಕ್ಕೆ ಭಾರಿ ಮನ್ನಣೆ..!

ದೆಹಲಿ:

(Photo: AP/Representational)

      ಭಾರತಕ್ಕೆ ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂರಕ್ಷಣಾ ಕೌನ್ಸಿಲ್‌ನ ಸದಸ್ಯತ್ವ ಸಿಗುವ ಮೂಲಕ ಭರ್ಜರಿ ಮನ್ನಣೆ ಸಿಕ್ಕಂತಾಗಿದೆ. ನಿನ್ನೆ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಮತದಾನದಲ್ಲಿ ಬರೋಬ್ಬರಿ 188 ಮತಗಳನ್ನು ಪಡೆದ ಭಾರತ ಮಾನವ ಹಕ್ಕು ಮಂಡಳಿಗೆ ಏಷ್ಯಾದ ಪ್ರತಿನಿಧಿಯಾಗಿ ಮೊದಲ ಸ್ಥಾನದಲ್ಲಿ ಆಯ್ಕೆ ಪಡೆದುಕೊಂಡಿತು.

      ಏಷ್ಯಾ ಪೆಸಿಫಿಕ್ ವಿಭಾಗಕ್ಕೆ ಭಾರತ ಸೇರಿ 5 ರಾಷ್ಟ್ರಗಳು ಸ್ಪರ್ಧಿಸಿದ್ದವು. ಚುನಾವಣಾ ಕಣದಲ್ಲಿದ್ದ ಭಾರತ, ಬಹರೇನ್, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಪ್ಪೈನ್ಸ್ ಎಲ್ಲಾ ದೇಶಗಳೂ ಆಯ್ಕೆಯಾಗುವ ನಿರೀಕ್ಷೆ ಇತ್ತು. ಭಾರತ ಅತೀ ಹೆಚ್ಚು ಮತಗಳನ್ನ ಪಡೆದು ಚುನಾಯಿತಗೊಂಡಿದ್ದು ವಿಶೇಷ.

       ಮೂರು ವರ್ಷಗಳ ಈ ಸದಸ್ಯತ್ವದ ಅವಧಿ 2019ರ ಜ. 1ರಿಂದ ಆರಂಭಗೊಳ್ಳಲಿದೆ. 193 ಸದಸ್ಯ ರಾಷ್ಟ್ರಗಳುಳ್ಳ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ಕೌನ್ಸಿಲ್‌ಗೆ ನೂತನ ಸದಸ್ಯರನ್ನು ಆರಿಸಲು ಚುನಾವಣೆ ನಡೆಸಲಾಗಿತ್ತು. ಒಟ್ಟು 18 ಸದಸ್ಯ ಸ್ಥಾನಗಳಿಗಾಗಿ ನಡೆದ ಗೌಪ್ಯ ಮತದಾನದಲ್ಲಿ ಪ್ರತಿ ದೇಶಕ್ಕೆ ಕನಿಷ್ಠ 97 ಮತಗಳು ಬೇಕಿದ್ದವು. ಪ್ರಾತಿನಿಧ್ಯಕ್ಕಾಗಿ ಏಷ್ಯಾ ಪೆಸಿಫಿಕ್‌ ಭಾಗಕ್ಕೆ ಕೌನ್ಸಿಲ್‌ನಲ್ಲಿ ಐದು ಸ್ಥಾನಗಳಿದ್ದು, ಭಾರತದೊಂದಿಗೆ ಈ ಪ್ರಾಂತ್ಯದಿಂದ ಬಹರೇನ್‌, ಬಾಂಗ್ಲಾದೇಶ, ಫಿಜಿ ಮತ್ತು ಫಿಲಿಪ್ಪೀನ್ಸ್‌ ರಾಷ್ಟ್ರಗಳೂ ಆಯ್ಕೆಯಾಗಿವೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link