8 ಅಪಾಚೆ ಯುದ್ಧ ವಿಮಾನಗಳು ವಾಯುಪಡೆಗೆ ಸೇರ್ಪಡೆ!!

       ಅಮೆರಿಕ ನಿರ್ಮಿತ 8 ಅಪಾಚೆ ಎಎಚ್​-64ಇ ಯುದ್ಧಹೆಲಿಕಾಪ್ಟರ್​ಗಳನ್ನು ಭಾರತೀಯ ವಾಯುಪಡೆ ತನ್ನ ಸೇವೆಗೆ ಸೇರ್ಪಡೆಗೊಳಿಸಿಕೊಂಡಿತು. 

      ಪಠಾನ್​ಕೋಟ್​ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ವಾಯುಪಡೆ ಮುಖ್ಯಸ್ಥ ಏರ್​ಚೀಫ್​ ಮಾರ್ಷಲ್​ ಬಿ.ಎಸ್​. ಧನೋವಾ ಹೆಲಿಕಾಪ್ಟರ್​ಗಳನ್ನು ಬರಮಾಡಿಕೊಂಡರು. ಬೋಯಿಂಗ್‌ ಇಂಡಿಯಾ ಅಧ್ಯಕ್ಷ ಸಲೀಲ್‌ ಗುಪ್ತೆ ಅವರು ವಾಯುಪಡೆಯ ಮುಖ್ಯಸ್ಥ ಬಿ.ಎಸ್‌. ಧನೋವಾ ಅವರಿಗೆ ಯುದ್ಧ ಹೆಲಿಕಾಪ್ಟರ್‌ನ ಕೀ ನೀಡಿದರು.

      ಒಟ್ಟು 22 ಅಪಾಚೆ ಯುದ್ಧಹೆಲಿಕಾಪ್ಟರ್​ಗಳನ್ನು ಖರೀದಿಸಲಾಗುತ್ತಿದೆ. ಈಗ ಸಂಪ್ರದಾಯಬದ್ಧವಾಗಿ 8 ಯುದ್ಧಹೆಲಿಕಾಪ್ಟರ್​ಗಳನ್ನು ವಾಯುಪಡೆ ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿದೆ. ಇನ್ನುಳಿದ ಹೆಲಿಕಾಪ್ಟರ್​ಗಳು ಕಂತಿನಲ್ಲಿ ಬರಲಿದ್ದು, ಹಂತಹಂತವಾಗಿ ಅವನ್ನು ಸೇವೆಗೆ ಸೇರ್ಪಡೆಗೊಳಿಸಿಕೊಳ್ಳಲಾಗುವುದು ಎನ್ನಲಾಗಿದೆ.

     22 ಅಪಾಚೆ ಯುದ್ಧ ಹೆಲಿಕಾಪ್ಟರ್‌ಗಳನ್ನು ಖರೀದಿಸುವ ಸಂಬಂಧ 2015ರ ಸೆಪ್ಟೆಂಬರ್‌ನಲ್ಲಿ ಭಾರತ ಹಾಗೂ ಅಮೆರಿಕ ನಡುವಣ ಬಹುಕೋಟಿ ಮೊತ್ತದ ರಕ್ಷಣಾ ಒಪ್ಪಂದ ಏರ್ಪಟ್ಟಿತ್ತು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ