ಜಮ್ಮು ಮತ್ತು ಕಾಶ್ಮೀರ:
ಪಾಕಿಸ್ತಾನಿ ಪಡೆ ಮತ್ತೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಯೋಧ ಹುತಾತ್ಮರಾದ ಘಟನೆ ನಡೆದಿದೆ.
ಲ್ಯಾನ್ಸ್ ನಾಯಕ್ ಕರ್ನೈಲ್ ಸಿಂಗ್ ಹುತಾತ್ಮರಾಗಿರುವುದಾಗಿ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.
ಪೂಂಚ್ ಜಿಲ್ಲೆಯ ಕೃಷ್ಣಾ ಘಾಟಿ ಸೆಕ್ಟರ್ ನಲ್ಲಿ ಕದನ ವಿರಾಮ ಉಲ್ಲಂಘಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿತ್ತು. ಪಾಕಿಸ್ತಾನ ಸೇನಾ ಪಡೆ ಪ್ರಚೋದನಕಾರಿಯಾಗಿ ಹಾಗೂ ನಿರಂತರವಾಗಿ ಗುಂಡಿನ ದಾಳಿ ನಡೆಸಿರುವುದಾಗಿ ಹೇಳಿದೆ.
ಪಾಕ್ ಸೇನೆಯ ಪ್ರಚೋನಕಾರಿ ದಾಳಿಗೆ ಭಾರತೀಯ ಸೇನಾ ಪಡೆ ತಕ್ಕ ಪ್ರತಿದಾಳಿ ನಡೆಸಿರುವುದಾಗಿ ಮೂಲಗಳು ತಿಳಿಸಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ