ದೆಹಲಿ :
ಮಹಾಮಾರಿ ಕೊರೊನಾ ವೈರಸ್ ನಿಂದಾಗಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಇದೀಗ ಓರ್ವ ಭಾರತೀಯ ವೈರಸ್ ಗೆ ಬಲಿಯಾಗಿದ್ದು ಇದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
80 ವರ್ಷದ ಮನೋಹರ್ ಕೃಷ್ಣಪ್ರಭು ಎಂಬವರೇ ಕೊರೊನಾಗೆ ಬಲಿಯಾದ ವ್ಯಕ್ತಿ. ಭಾರತೀಯ ಮೂಲದ ಇವರು ಬ್ರಿಟನ್ ನಲ್ಲಿ ವಾಸವಿದ್ದರು ಎನ್ನಲಾಗಿದ.
ವ್ಯಕ್ತಿಯೊಬ್ಬರಿಂದ ಕೃಷ್ಣ ಪ್ರಭುಗೆ ಕೊರೊನಾ ಬಂದಿತ್ತು ಎನ್ನಲಾಗಿದ್ದು, ಇವರ ಮಗನಿಗೂ ಸೋಂಕು ತಗುಲಿದ್ದು ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 10 ದಿನಗಳ ಹಿಂದೆ ಪ್ರಭು ಆಸ್ಪತ್ರೆಗೆ ದಾಖಲಾಗಿದ್ದ ಮನೋಹರ್ ರವರು ಲಂಡನ್ ನ ವ್ಯಾಟ್ ಪೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ