ವಿಶ್ವದ ಟಾಪ್ 5 ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತಕ್ಕೆ 4ನೇ ಸ್ಥಾನ!!

ನವದೆಹಲಿ : 

     ವಿಶ್ವದ ಬಲಿಷ್ಠ ಮಿಲಿಟರಿ ಪಡೆಗಳಲ್ಲಿ ಭಾರತೀಯ ಸೇನೆ 4ನೇ ಸ್ಥಾನವನ್ನ ಪಡೆದುಕೊಂಡಿದೆ ಎಂದು ಮಿಲಿಟರಿ ಡೈರೆಕ್ಟ್ ಈ ವರದಿ ನೀಡಿದೆ.

     ಹೌದು ಮಿಲಿಟರಿ ಡೈರೆಕ್ಟ್ ವೆಬ್ಸೈಟ್ ಬಿಡುಗಡೆ ಮಾಡಿರುವ ಅಧ್ಯಯನ ವರದಿ ಪ್ರಕಾರ ಭಾರತ 4ನೇ ಸ್ಥಾನ ಪಡೆದುಕೊಂಡಿದೆ. ಇನ್ನೂ ವಿಶ್ವದ ದೊಡ್ಡಣ್ಣ ಅಮೆರಿಕಾದ ಸೇನಾ ಬಲ 2ನೇ ಸ್ಥಾನಕ್ಕೆ ಕುಸಿದಿದೆ. ಬಲಿಷ್ಠ ಸೇನೆ ಹೊಂದಿರುವ ಮೊದಲ ರಾಷ್ಟ್ರ ಚೈನಾ ಆಗಿದ್ರೆ, 2ನೇ ದೇಶ ಅಮೆರಿಕಾ, ಮೂರನೇ ರಾಷ್ಟ್ರ ರಷ್ಯಾ. 4ನೇ ಸ್ಥಾನದಲ್ಲಿ ಭಾರತವಿದೆ. 5ನೇ ಸ್ಥಾನದಲ್ಲಿ ಫ್ರಾನ್ಸ್ , 6ನೇ ಸ್ಥಾನದಲ್ಲಿ ಬ್ರಿಟನ್ ಇದೆ.

     ಸರ್ವಶ್ರೇಷ್ಟ ಮಿಲಿಟರಿ ಬಲದ ಸೂಚ್ಯಂಕ’ ಅಧ್ಯಯನ ವರದಿಯಲ್ಲಿ ರಕ್ಷಣಾ ಕ್ಷೇತ್ರಕ್ಕೆ ಅನುದಾನ, ಸಕ್ರಿಯ ಮತ್ತು ಸಕ್ರಿಯವಲ್ಲದ ಸೇನಾ ಸಿಬಂದಿಗಳ ಸಂಖ್ಯೆ, ವಾಯುಪಡೆ, ನೌಕಾಬಲ, ಭೂಸೇನೆ ಮತ್ತು ಪರಮಾಣು ಶಸ್ತ್ರಗಳ ಸಂಪನ್ಮೂಲ, ಸರಾಸರಿ ವೇತನ, ಆಯುಧಗಳ ತೂಕವನ್ನು ಲೆಕ್ಕ ಹಾಕಿ ಈ ವರದಿ ತಯಾರಿಸಲಾಗಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ