ನಾಳೆಯಿಂದ 80 ಹೊಸ ರೈಲುಗಳ ಸಂಚಾರ ಆರಂಭ!!

ನವದೆಹಲಿ :

      ರೈಲ್ವೆ  ಇಲಾಖೆ ಹಂತ ಹಂತವಾಗಿ ರೈಲು ಸಂಚಾರ ಆರಂಭಿಸಲು ಮುಂದಾಗಿದ್ದು, ಸೆಪ್ಟಂಬರ್‌ 12 ರಿಂದ 80 ಹೊಸ ರೈಲುಗಳು ಸಂಚಾರ ಆರಂಭಿಸಲಿವೆ.

      ಈಗಾಗಲೇ ಬುಕ್ಕಿಂಗ್‌ ಪ್ರಕ್ರಿಯೆ ಶುರುವಾಗಿದ್ದು, ಇವುಗಳ ಜೊತೆಗೆ ಚಾಲನೆಯಲ್ಲಿರುವ 230 ವಿಶೇಷ ರೈಲುಗಳು ಜೊತೆಗಿರಲಿವೆ. ಇವು ಸಂಪೂರ್ಣವಾಗಿ ಕಾಯ್ದಿರಿಸಿದ ರೈಲುಗಳಾಗಿದ್ದು, ಈ ಹೊಸ 80 ರೈಲುಗಳು ಈಗಾಗಲೇ ಚಾಲನೆಯಲ್ಲಿರುವ 230 ವಿಶೇಷ ರೈಲುಗಳ ಜೊತೆಗೆ ಇರಲಿವೆ ಎಂದು ಇತ್ತೀಚೆಗೆ ಭಾರತೀಯ ರೈಲ್ವೆಯ ಮೊದಲ ಸಿಇಒ ಆಗಿ ನೇಮಕಗೊಂಡಿರುವ ಯಾದವ್ ತಿಳಿಸಿದ್ದಾರೆ.

     ಈ ರೈಲುಗಳ ಸಮಯವು ಸಾಮಾನ್ಯ ರೈಲುಗಳಂತೆಯೇ ಇರಲಿದ್ದು, ಈ ಹೊಸ ರೈಲುಗಳಲ್ಲಿ ದೆಹಲಿ-ಇಂದೋರ್, ಯಶ್ವಂತ್ಪುರ್-ಗೋರಖ್ಪುರ್, ಪುರಿ-ಅಹಮದಾಬಾದ್, ನವದೆಹಲಿ-ಬೆಂಗಳೂರು ಮಾರ್ಗಗಳು ಸೇರಿವೆ.  

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link