ಆಸ್ಟ್ರೇಲಿಯಾ ನೆಲದಲ್ಲಿ ಭಾರತಕ್ಕೆ ದಿಗ್ವಿಜಯ!!

0
29

ಸಿಡ್ನಿ :

     ಆಸ್ಟ್ರೇಲಿಯಾ ನೆಲದಲ್ಲಿ ಭಾರತದ ಮೊಟ್ಟ ಮೊದಲ ಟೆಸ್ಟ್ ಸರಣಿ ಜಯಿಸುವ ಮೂಲಕ ವಿರಾಟ್ ಕೊಹ್ಲಿ ನೇತೃತ್ವದ ಬಳಗ ಐತಿಹಾಸಿಕ ಸಾಧನೆ ಮಾಡಿದೆ. 

    ಸೋಮವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 2.30ರ ವೇಳೆ ಉಭಯ ತಂಡಗಳು ಹಸ್ತಲಾಘವಕ್ಕೆ ಇಳಿದ ಹೊತ್ತಿನಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಸೃಷ್ಟಿಯಾಯಿತು.

      ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಮೂರು ಪಂದ್ಯಗಳಲ್ಲಿ ಭಾರತ 2-1 ಮುನ್ನಡೆ ಸಾಧಿಸಿತ್ತು. 4ನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ ಕೊನೆಯ ದಿನದಾಟದ ಪಂದ್ಯ ಮಳೆಯ ಕಾರಣ ಮುಂದುವರಿಯಲಿಲ್ಲ. ಅಂತಿಮವಾಗಿ ಪಂದ್ಯವನ್ನು ಡ್ರಾ ಎಂದು ಘೋಷಿಲಾಯಿತು. ಸರಣಿ ಮುನ್ನಡೆಯಲ್ಲಿದ್ದ ಭಾರತ ಸರಣಿ ವಶಪಡಿಸಿಕೊಂಡಿತ್ತು. 

      ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಜಯಿಸಿದ ಏಷ್ಯಾದ ಮೊದಲ ನಾಯಕನಾಗಿ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಸರಣಿ ಜಯಿಸಿದ್ದು ತಂಡದ ಪ್ರಯತ್ನದಿಂದ ಎಂದು ಕೊಹ್ಲಿ ಹೇಳಿದರೂ ಐತಿಹಾಸಿಕ ದಾಖಲೆಗೆ ಕೊಹ್ಲಿ ಕಾರಣರಾಗಿದ್ದಾರೆ. 

      1947-48ರಲ್ಲಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ಟೆಸ್ಟ್ ಸರಣಿ ಜಯಿಸಿತ್ತು. ಅಲ್ಲಿಂದ ಮುಂದೆ ಯಾವ ಟೆಸ್ಟ್ ಸರಣಿಯೂ ಭಾರತದ ವಶವಾಗಿರಲಿಲ್ಲ. ಈ ನೆಲೆಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರು ಸೌರವ್ ಗಂಗೂಲಿ, ಎಂಎಸ್‌ ಧೋನಿ ಅವರಂತ ಮಾಜಿ ನಾಯಕರನ್ನು ಹಿಂದಿಕ್ಕಿದಂತಾಗಿದೆ. 

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

LEAVE A REPLY

Please enter your comment!
Please enter your name here