ದುಬೈ:
ಸ್ಮೃತಿ ಮಂದಾನಾಗೆ ಈ ವರ್ಷದ ಮಹಿಳಾ ಕ್ರಿಕೆಟಿಗ, ವರ್ಷದ ಮಹಿಳಾ ಏಕದಿನ ಆಟಗಾರ್ತಿ ಪ್ರಶಸ್ತಿಗಳು ಸಹ ಲಭ್ಯವಾಗಿವೆ. ಭಾರತೀಯ ಮಹಿಳಾ ಕ್ರಿಕೆಟರ್ವೊಬ್ಬರಿಗೆ ಇದೇ ಮೊದಲ ಬಾರಿಗೆ ಈ ರೀತಿಯ ಅವಾರ್ಡ್ ಲಭ್ಯವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಇಂದು ಮಹಿಳಾ ಕ್ರಿಕೆಟ್ನ ವಾರ್ಷಿಕ ಪ್ರಶಸ್ತಿ ಪ್ರಕಟಿಸಿದೆ.

ಉಳಿದಂತೆ ಆಸ್ಟ್ರೇಲಿಯಾ ತಂಡದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಐಸಿಸಿ ಟಿ20 ವರ್ಷದ ಆಟಗಾರ್ತಿ ಪ್ರಶಸ್ತಿ ಮತ್ತು ಇಂಗ್ಲೆಂಡ್ ತಂಡದ ಸೋಫಿ ಎಕ್ಲೆಸ್ಟೋನ್ ಅವರು ಐಸಿಸಿ ಎಮರ್ಜಿಂಗ್ ಪ್ಲೇಯರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಮೃತಿ ಮಂದಾನಾ ಕ್ರಮವಾಗಿ ಏಕದಿನ ಹಾಗೂ ಟಿ20 ಪಂದ್ಯಗಳಲ್ಲಿ 669 ಹಾಗೂ 622ರನ್ಗಳಿಕೆ ಮಾಡಿದ್ದಾರೆ.
ಪ್ರಶಸ್ತಿ ಲಭ್ಯವಾಗುತ್ತಿದ್ದಂತೆ ಮಾತನಾಡಿರುವ ಸ್ಮೃತಿ ಮಂದಾನಾ, ಎಲ್ಲ ಪ್ಲೇಯರ್ಸ್ ತಂಡದ ಗೆಲುವು ಹಾಗೂ ದೇಶಕ್ಕಾಗಿ ಆಡುತ್ತಾರೆ. ನಮ್ಮ ಶ್ರಮ ಯಸಸ್ಸು ಕಂಡಾಗ ಹಾಗೂ ತಂಡ ಗೆಲುವಿನ ನಗೆ ಬೀರಿದಾಗ ಇಂತಹ ಪ್ರಶಸ್ತಿಗಳು ನಮ್ಮನ್ನ ಆರಿಸಿ ಬಂದರೆ ಖಂಡಿತ ಖುಷಿಯಾಗುತ್ತದೆ ಎಂದಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
