ದೇಶದಲ್ಲಿ16 ಲಕ್ಷ ಗಡಿ ದಾಟಿದ ಸೋಂಕಿತರ ಸಂಖ್ಯೆ!!!

 ನವದೆಹಲಿ: 

      ಮಹಾಮಾರಿ ​​ ಕೊರೊನಾ ಆರ್ಭಟಕ್ಕೆ ಭಾರತ ತಲ್ಲಣಗೊಂಡಿದ್ದು, ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 16 ಲಕ್ಷದ ಗಡಿ ದಾಟಿದೆ.

      ಕಳೆದ 24 ಗಂಟೆಗಳಲ್ಲಿ ಈವರೆಗೆ ಅತಿ ಹೆಚ್ಚು ಪ್ರಕರಣಗಳು ಎಂಬಂತೆ ಬರೋಬ್ಬರಿ 55,079 ಸೋಂಕಿತರು ಪತ್ತೆಯಾಗಿದ್ದು, 779 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 16,38,871 ಹಾಗೂ ಮೃತರ ಸಂಖ್ಯೆ 35,747ಕ್ಕೆ ಏರಿಕೆಯಾಗಿದೆ.

      ಒಟ್ಟು ಸೋಂಕಿತರ ಪೈಕಿ 10,57,806 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​​​​ ಆಗಿದ್ದಾರೆ. ಉಳಿದಂತೆ 5,45,318 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap