ಭಾರತೀಯ ವಾಯುಪಡೆಗೆ ರಫೇಲ್ ಅಧಿಕೃತ ಸೇರ್ಪಡೆ!!

ನವದೆಹಲಿ: 

     ಮೊದಲ ಬ್ಯಾಚ್​ನಲ್ಲಿ ಭಾರತಕ್ಕೆ ಹಸ್ತಾಂತರಿಸಲ್ಪಟ್ಟಿದ್ದ 5 ರಫೇಲ್​ ಫೈಟರ್ ಜೆಟ್​ಗಳು ಅಧಿಕೃತವಾಗಿ ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಿವೆ.

     ಹರಿಯಾಣದ ಅಂಬಾಲಾ ವಾಯುನೆಲೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್​ನ ರಕ್ಷಣಾ ಸಚಿವ ಫ್ಲಾರೆನ್ಸ್ ಪಾರ್ಲಿ ಹಾಗೂ ಭಾರತದ ವಾಯುಪಡೆಯ ಉನ್ನತಾಧಿಕಾರಿಗಳ ಸಮಕ್ಷಮದಲ್ಲಿ ನಡೆದ ಸಮಾರಂಭದಲ್ಲಿ ಸರ್ವಧರ್ಮಗಳ ಧಾರ್ಮಿಕ ವಿಧಿ ವಿಧಾನಗಳ ಮೂಲಕ ರಫೇಲ್ ಯುದ್ಧ ವಿಮಾನವನ್ನು ವಾಯುಪಡೆಯ ಭತ್ತಳಿಕೆಗೆ ಸೇರಿಸಲಾಗಿದೆ.

     ಫ್ರಾನ್ಸ್ ರಕ್ಷಣಾ ಸಚಿವೆ ಫ್ಲಾರೆನ್ಸ್ ಪಾರ್ಲೆ ಈ ಕಾರ್ಯಕ್ರಮಕ್ಕಾಗಿ ನವದೆಹಲಿಗೆ ಆಗಮಿಸಿದ್ದಾರೆ. ಈ ಕಾರ್ಯ ಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ಫ್ರಾನ್ಸ್‌ ರಕ್ಷಣಾ ಸಚಿವೆ ಫ್ಲಾರೆನ್ಸ್‌ ಪಾರ್ಲೆ, ರಕ್ಷಣಾ ಪಡೆಗಳ ಮುಖ್ಯಸ್ಥ ಜ.ಬಿಪಿನ್‌ ರಾವತ್‌, ಐಎಎಫ್ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ಆರ್‌.ಕೆ.ಎಸ್‌.ಬಧೌರಿಯಾ ಸೇರಿ ಪ್ರಮುಖರು ಭಾಗವಹಿಸಿದ್ದರು.

      ಆಕಾಶದಲ್ಲಿ ಹಾರುತ್ತಿರುವಾಗಲೇ ಶತ್ರುಗಳನ್ನು ಸದೆಬಡಿಯುವ ಸಾಮರ್ಥ್ಯ ರಫೇಲ್​ ಯುದ್ಧ ವಿಮಾನಗಳಿಗಿದೆ. ಏರ್​​ ಟು ಏರ್​ ಅಂದರೆ ಬಾನಿನಲ್ಲೇ ಶತ್ರು ಸೇನೆಯ ವಿಮಾನಗಳ ಮೇಲೆ ಬಾಂಬ್ ದಾಳಿ ಮಾಡುವ ಜೊತೆಗೆ ಏರ್​ ಟು ಅರ್ತ್​ ಅಂದರೆ ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ ನೈಪುಣ್ಯವನ್ನು ಈ ಸಮರ ವಿಮಾನಗಳು ಹೊಂದಿವೆ.

     ಎಂತಹ ಹವಾಮಾನದಲ್ಲೂ ಶತ್ರು ಪಡೆಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯ ಹೊಂದಿರುತ್ತವೆ. ಕಣ್ಣಿಗೆ ಕಾಣಿಸದಷ್ಟು ದೂರದಿಂದ ದಾಳಿ​ ಮಾಡಬಲ್ಲ ಶಕ್ತಿ ರಫೇಲ್​ ಯುದ್ಧ ವಿಮಾನಗಳಿಗಿದ್ದು, ನೂತನ ಜೆಟ್​ಗಳಿಂದ ಭಾರತೀಯ ರಕ್ಷಣಾ ವ್ಯವಸ್ಥೆಯ ಬಲ ಮತ್ತಷ್ಟು ಹೆಚ್ಚಿದೆ.

     ಈಗ ಆಗಿರುವ ಒಪ್ಪಂದದ ಜೊತೆಗೆ ಇನ್ನೂ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತ ಫ್ರಾನ್ಸ್‌ನಿಂದ ಖರೀದಿ ಮಾಡುವ ನಿರೀಕ್ಷೆ ಇದೆ. ಈ ಕುರಿತ ಮಾತುಕತೆ ಇಂದು ವಿಮಾನಗಳ ಸೇರ್ಪಡೆ ಕಾರ್ಯಕ್ರಮದ ಬಳಿಕ ನಡೆಯಲಿದೆ.

 

 

Recent Articles

spot_img

Related Stories

Share via
Copy link
Powered by Social Snap