ರಾತ್ರಿ ಗಡಿ ನುಸುಳಲು ಪಾಕ್ ಯತ್ನ : ನುಸುಳುಕೋರರನ್ನ ಹೊಡೆದುರುಳಿಸಿದ ಸೇನೆ!

ದೆಹಲಿ :

      ಇತ್ತೀಚೆಗೆ ಭಾರತದ ಗಡಿಯೊಳಗೆ ನುಗ್ಗುವ ಪಾಕ್ ನ ಬಿಎಟಿಯ ಪ್ರಯತ್ನವನ್ನು ಭಾರತೀಯ ಸೇನಾಪಡೆ ವಿಫಲಗೊಳಿಸಿರುವುದು ಬೆಳಕಿಗೆ ಬಂದಿದೆ.

      ಸೆಪ್ಟೆಂಬರ್ 12 ಮತ್ತು 13ರಂದು ಪಾಕ್​ ಆಕ್ರಮಿತ ಕಾಶ್ಮೀರದ ಹಾಜಿಪಿರ್ ಸೆಕ್ಟರ್​ನಲ್ಲಿ ಭಾರತದ ಗಡಿಯೊಳಕ್ಕೆ ನುಸುಳಲು ಯತ್ನಿಸಿದ ನುಸುಳುಕೋರರನ್ನ ಭಾರತೀಯ ಸೇನೆ ಹೊಡೆದುರುಳಿಸಿರುವ ಸಿಸಿಟಿವಿ ವೀಡಿಯೋ ಇಮೇಜ್ ನ್ನು ಭಾರತೀಯ ಸೇನಾಪಡೆ ಬಿಡುಗಡೆಗೊಳಿಸಿದೆ.

      ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದ ನಂತರ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಸಮೀಪ ಇರುವ ಉರಿ, ಕೇರಾನ್, ಫೂಂಚ್, ಮೆಂಧಾರ್ ಮತ್ತು ನೌಶೇರಾ ಸೆಕ್ಟರ್ ಸೇರಿದಂತೆ ವಿವಿಧ ಪ್ರದೇಶಗಳ ಸಮೀಪ ತನ್ನ ಬಿಎಟಿ(ಬಾರ್ಡರ್ ಆಯಕ್ಷನ್ ಟೀಮ್) ಸೈನಿಕರು ಹಾಗೂ ಉಗ್ರರನ್ನು ನಿಯೋಜಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap