ದೆಹಲಿ :
ನಿರ್ಭಯ ಅತ್ಯಾಚಾರ, ಕೊಲೆ ಪ್ರಕರಣ ಆರೋಪಿಗಳ ಶಿಕ್ಷೆ ವಿಳಂಬವಾಗುತ್ತಿರುವುದಕ್ಕೆ ಗರಂ ಆಗಿರುವ ಹೈಕೋರ್ಟ್ ಒಂದು ವಾರದ ಒಳಗಾಗಿ ನಾಲ್ವರು ಅತ್ಯಾಚಾರ ಆರೋಪಿಗಳನ್ನು ಗಲ್ಲಿಗೇರಿಸುವಂತೆ ಮಹತ್ವದ ಆದೇಶ ನೀಡಿದೆ.
ನಿರ್ಭಯಾ ಅಪರಾಧಿಗಳ ಡೆತ್ ವಾರೆಂಟ್ ಎರಡು ಬಾರಿ ಮುಂದೂಡಲ್ಪಟ್ಟಿದೆ. ಕಾನೂನು ಆಯ್ಕೆಗಳನ್ನು ಒಂದೊಂದಾಗಿ ಒಬ್ಬೊಬ್ಬರೆ ಬಳಸಿಕೊಂಡು ಡೆತ್ ವಾರೆಂಟ್ ಮುಂದೂಡಲು ಯಶಸ್ವಿಯಾಗ್ತಿದ್ದಾರೆ. ಆದ್ರೆ ಎಲ್ಲ ಕಾನೂನು ಪ್ರಕ್ರಿಯೆಗಳನ್ನು 7 ದಿನಗಳೊಳಗೆ ಮುಗಿಸಬೇಕೆಂದು ಕೋರ್ಟ್ ಹೇಳಿದೆ.
ವಿಚಾರಣಾ ನ್ಯಾಯಾಲಯ ಎಲ್ಲರಿಗೂ ಒಟ್ಟಿಗೆ ಶಿಕ್ಷೆ ವಿಧಿಸಿದ್ದು, ಅಪರಾಧಿಗಳು ಮಾಡಿದ ಕೃತ್ಯ ಸಮಾಜದ ಮೇಲೆ ಪರಿಣಾಮ ಬೀರಿದೆ. ಸಂವಿಧಾನದಲ್ಲಿ ಅವ್ರಿಗೂ ಕಾನೂನಿನ ಪ್ರಕಾರ ಹೋರಾಡುವ ಅಧಿಕಾರವಿದೆ. ಅಪರಾಧಿಗಳಿಗೆ ಬಹಳ ಸಮಯ ಸಿಕ್ಕಿದೆ. 2017ರಲ್ಲಿ ಅರ್ಜಿ ವಜಾಗೊಂಡರೂ ಡೆತ್ ವಾರೆಂಟ್ ಬಗ್ಗೆ ಯಾರೂ ತಲೆಕೆಡಿಸಿಕೊಂಡಿರಲಿಲ್ಲವೆಂದು ಕೋರ್ಟ್ ಹೇಳಿದೆ.
ಅಲ್ಲದೇ ಒಬ್ಬೊಬ್ಬರಿಗೂ ಪ್ರತ್ಯೇಕವಾಗಿ ಶಿಕ್ಷೆ ಜಾರಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿತು. ಒಂದು ಪ್ರಕರಣದ ಆರೋಪಿಗಳ ಪೈಕಿ, ಒಬ್ಬ ಆರೋಪಿಯ ದಯಾ ಅರ್ಜಿ ಬಾಕಿ ಇರುವಾಗ ಇನ್ನುಳಿದವರಿಗೆ ಶಿಕ್ಷೆ ಜಾರಿ ಮಾಡಬಹುದು ಎಂದು ಕಾನೂನಿನಲ್ಲಿ ಹೇಳಿಲ್ಲ ಎಂದು ಕೋರ್ಟ್ ತಿಳಿಸಿತು. ಹೀಗಾಗಿ ಎಲ್ಲರನ್ನೂ ಒಟ್ಟಿಗೇ ಶಿಕ್ಷೆಗೆ ಗುರಿಪಡಿಸಬೇಕು ಎಂದಿತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
