10 ಉಪಗ್ರಹಗಳ ಉಡಾವಣೆ ; ಮತ್ತೊಂದು ಸಾಧನೆಗೈದ ಇಸ್ರೋ!!

ಇಸ್ರೋ : 

     ಪಿಎಸ್‌ಎಲ್ ವಿ-ಸಿ 49 ರಾಕೆಟ್ ಮೂಲಕ 10 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮತ್ತೊಂದು ಸಾಧನೆ ಮಾಡಿದೆ.

      ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಇಂದು ಮಧ್ಯಾಹ್ನ ಭೂ ವೀಕ್ಷಣಾ ಉಪಗ್ರಹ ಹಾಗೂ 9 ವಿದೇಶಿ ಉಪಗ್ರಹಗಳನ್ನು ಒಳಗೊಂಡ ಪಿಎಸ್‌ಎಲ್ ವಿ ಸಿ-49 ರಾಕೆಟ್ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. 

     ಇಸ್ರೋದ 51ನೇ ಮಿಷನ್‌ ಇದಾಗಿದ್ದು, ಕೃಷಿ, ಅರಣ್ಯ, ಮನುಷ್ಯರ ಚಟುವಟಿಕೆ ಮತ್ತು ವಿಪತ್ತು ನಿರ್ವಹಣೆ ಕಾರ್ಯಗಳಿಗೆ ಭೂವೀಕ್ಷಣೆ ಸ್ಯಾಟಲೈಟ್‌ ನೆರವಾಗಲಿದೆ. ಅಲ್ಲದೇ ಎಲ್ಲಾ ಕಾಲಮಾನದಲ್ಲೂ ಇದು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ.

    ಕೊರೋನಾ ಕಾರಣದಿಂದ ಕಳೆದ ಕೆಲ ತಿಂಗಳುಗಳಿಂದ ಇಸ್ರೋದ ಅಂತರಿಕ್ಷ ಕಾರ್ಯಕ್ರಮಗಳು ಸ್ಥಗಿತವಾಗಿತ್ತು. ಇದೀಗ ಭೂ ವೀಕ್ಷಣಾ ಉಪಗ್ರಹ ಇಒಎಸ್-01ನ ಉಡಾವಣೆ ಮೂಲಕ ಮತ್ತೆ ಇಸ್ರೋ ಅಂತರಿಕ್ಷ ಕಾರ್ಯಕ್ರಮಗಳಿಗೆ ಚಾಲನೆ ದೊರೆತಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link