ಸ್ಫೋಟಕ ಹೊತ್ತು ಬಂದ ಕಾರು ; ಮತ್ತೊಮ್ಮೆ ಪುಲ್ವಾಮಾ ರೀತಿ ದಾಳಿಗೆ ಸಂಚು!!

ಶ್ರೀನಗರ:

     ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಮತ್ತೊಮ್ಮೆ ಭಾರೀ ದಾಳಿ ನಡೆಸಲು ಉಗ್ರರು ನಡೆಸಿದ್ದ ಸಂಚನ್ನು ಭಾರತೀಯ ಯೋಧರು ವಿಫಲಗೊಳ್ಳುವಂತೆ ಮಾಡಿದ್ದಾರೆ.

     ಮೂಲಗಳ ಪ್ರಕಾರ, ಕಳೆದ ರಾತ್ರಿ ಪುಲ್ವಾಮಾ ಪೊಲೀಸರಿಗೆ ಭಯೋತ್ಪಾದಕರು ಸ್ಫೋಟಕ ತುಂಬಿದ್ದ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದು, ಇದನ್ನು ಯಾವುದಾದರು ಸ್ಥಳದಲ್ಲಿ ಸ್ಫೋಟಿಸುವ​ ಸಾಧ್ಯತೆ ಇದೆ ಎಂದು ಮಾಹಿತಿ ಸಿಕ್ಕಿತ್ತು. ಪೊಲೀಸರು ಭದ್ರತಾ ಪಡೆಗಳ ಸಹಾಯ ಪಡೆದುಕೊಂಡು ಸಾಧ್ಯವಿರುವ ಎಲ್ಲಾ ಸ್ಥಳಗಳನ್ನು ತಲುಪಿ ರಸ್ತೆಯಿಂದ ದೂರ, ಸುರಕ್ಷಿತ ಸ್ಥಳದಲ್ಲಿ ಅಡಗಿದ್ದರು. 

      ನಕಲಿ ನೋಂದಣಿ ಸಂಖ್ಯೆ ಹೊಂದಿದ್ದ ಕಾರು ಇಂದು ಬೆಳಿಗ್ಗೆ ಚೆಕ್ ಪಾಯಿಂಟ್ ನಲ್ಲಿ ಚಲಿಸುತ್ತಿತ್ತು. ಈ ವೇಳೆ ಭದ್ರತಾ ಪಡೆಗಳು ನಿಲ್ಲಿಸುವಂತೆ ಸೂಚಿಸಿದರು, ಚಾಲಕ ಮತ್ತಷ್ಟು ವೇಗವಾಗಿ ಚಲಿಸಿಕೊಂಡು ಹೋಗಲು ಆರಂಭಿಸಿದ್ದ. 

      ಈ ವೇಳೆ ಭದ್ರತಾ ಪಡೆಗಳು ಗುಂಡು ಹಾರಿಸಿದ್ದಾರೆ. ಆದರೂ ವಾಹನ ಚಲನೆ ಮುಂದುವರೆದಿದ್ದು, ಬಳಿಕ ಕಾರು ಚಾಲಕ ವಾಹನ ಬಿಟ್ಟು ಪರಾರಿಯಾಗುವಲ್ಲಿ ಸಫಲನಾಗಿದ್ದಾನೆಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
      ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಸೇನೆ ಮತ್ತು ಪುಲ್ವಾಮಾ ಪೊಲೀಸ್ ಪಡೆಯ ಸಮಯೋಚಿತ ಕಾರ್ಯದಿಂದ ಭಾರಿ ಅನಾಹುತವೊಂದು ತಪ್ಪಿದೆ. 
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link